ಮಡಿಕೇರಿ, ಜ. ೨೨: ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಬ್ಬೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಿಜಿಟಲ್ ಗ್ರಂಥಾಲಯ, ಅಂಚೆ ಕಚೇರಿ, ಗ್ರಾಮ ಲೆಕ್ಕಾಧಿಕಾರಿಯವರ ಕಚೇರಿ, ಸಹಾಯ ಹಸ್ತ ಕೊಠಡಿಯನ್ನು ವೀರಾಜಪೇಟೆ ಕ್ಷೇತ್ರ ವಿಧಾನಸಭಾ ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿö್ಮÃ ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿ, ಶಾಸಕರ ನೇತೃತ್ವದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಲೈಬ್ರರಿಯನ್ನು ಆರಂಭಿಸಲಾಗಿದ್ದು, ಡಿಜಿಟಲ್ ಲೈಬ್ರರಿ ಹೊಂದಿದ ಮೊದಲ ಜಿಲ್ಲೆ ಎಂದು ಕೊಡಗು ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಸಜ್ಜಿತವಾದ ಲೈಬ್ರರಿ ಮುಖಾಂತರ ಗ್ರಾಮಮಟ್ಟದಲ್ಲಿ ಪುಸ್ತಕಗಳು ಲಭ್ಯವಾಗುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ನಿರ್ವಹಣೆ ಘಟಕ ನಿರ್ಮಾಣ ವಾಗುತ್ತಿದೆ. ಕುಂಜಿಲ ಅಮೃತ ಗ್ರಾಮ ಪಂಚಾಯಿತಿಯಾಗಿ ಹೊರಹೊಮ್ಮಿದೆ ಎಂದರು.

ನಂತರ ಮಾತನಾಡಿದ ಕೆ.ಜಿ. ಬೋಪಯ್ಯ ಅವರು, ಓದುವ ಹವ್ಯಾಸವನ್ನು ಉತ್ತೇಜಿಸುವ ಸಲುವಾಗಿ, ಸುಸಜ್ಜಿತವಾದ ನೂತನ ಡಿಜಿಟಲ್ ಲೈಬ್ರರಿಯನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ೭ ಕೋಟಿಯಷ್ಟು ವಿವಿಧ ಇ - ಪುಸಕ್ತಗಳು ಲಭ್ಯವಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಸಹಾಯಕವಾಗುವ ಪುಸ್ತಕಗಳು ಸುಲಭವಾಗಿ ಡಿಜಿಟಲ್ ಲೈಬ್ರರಿಯಲ್ಲಿ ಲಭ್ಯವಾಗುತ್ತದೆ. ಇಂಟರ್‌ನೆಟ್ ಸೌಲಭ್ಯವಿದ್ದು, ಉಚಿತ ಆನ್‌ಲೈನ್ ಕ್ಲಾಸ್‌ಅನ್ನು ಕೂಡ ಕೇಳಬಹುದಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಅಯ್ಯಪ್ಪ ಸಂಪನ್, ಯೋಜನಾ ನಿರ್ದೇಶಕರು ಶ್ರೀಕಾಂತ್ ಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ವೈ ಅಶೋಕ್ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ, ಸದಸ್ಯರು, ಎನ್.ಆರ್.ಎಲ್.ಎಮ್ ಟಿ.ಪಿ.ಎಮ್, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.