ಕೂಡಿಗೆ, ಜ. ೨೨: ವಿದ್ಯಾರ್ಥಿಗಳ ಆಲೋಚನೆಯ ಮೂಲಕ ಭಾವಕೋಶಕ್ಕೆ ಸಂಬAಧಿಸಿದAತೆ ಅನೇಕ ವಿಷಯಗಳನ್ನು ತಿಳಿಯುವುದರಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಆಲೋಚನೆಗಳು ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ. ಅಲ್ಲದೆ ಶಿಬಿರವು ರಾಷ್ಟçದ ಬಗ್ಗೆ ಗೌರವ, ಸೇವೆಯ ಬಗ್ಗೆ ಒಲವು ನಾಯಕತ್ವದ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಶೈಕ್ಷಣಿಕವಾಗಿ ಒಳ್ಳೆಯ ಅನುಭವವನ್ನು ತುಂಬಿಸಿಕೊAಡರೆ ಮುಂದಿನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ವಾಗಲಿದೆ ಎಂದು ಡಯಟ್ ಪ್ರಾಂಶುಪಾಲ ಕೆ.ವಿ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಭಾರತ್ ಸ್ಕೌಟ್ಸ್ ಮತ್ತು ಕರ್ನಾಟಕ ಗೈಡ್ಸ್ ಮತ್ತು ಜಿಲ್ಲಾ ಸಂಸ್ಥೆ ಇವರ ವತಿಯಿಂದ ರಾಜ್ಯ ಮಟ್ಟದ ರೋರ‍್ಸ್/ ರೇಂರ‍್ಸ್ಗಳಿಗೆ ಮೂರು ದಿನಗಳ ಕಾಲ ಕೂಡಿಗೆಯಲ್ಲಿ ಆಯೋಜಿಸಿದ ತೋಟಗಾರಿಕಾ ಮತ್ತು ಕೃಷಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ಟೇರಾ, ಶಿಬಿರವು ವಿದ್ಯಾರ್ಥಿಗಳಿಗೆ ಜೀವನದ ನಿರ್ವಹಣೆಯ ಅನುಭವ ಮತ್ತು ಉತ್ತಮ ನಾಗರಿಕ ಜೀವನ ಸಾಗಿಸಲು ಸಹಕಾರಿಯಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯೆ ಫಿಲೋಮಿನಾ, ಡಯಟ್‌ನ ಹಿರಿಯ ಉಪನ್ಯಾಸಕಿ ಹಾಗೂ ಜಿಲ್ಲಾ ಗೈಡ್ಸ್ನ ಆಯುಕ್ತರಾದ ಬಿ.ಬಿ. ಸಾವಿತ್ರಿ, ಜಿಲ್ಲಾ ಸಂಘಟನೆ ಸಂಯೋಚಕಿ ಧಮಾಯಂತಿ, ಉಪನ್ಯಾಸಕರಾದ ಸಿದ್ದೇಶ್, ಕೃಷ್ಣಪ್ಪ, ನಳಿನಿ, ಸೇರಿದಂತೆ ಸ್ಕೌಟ್ ಶಿಕ್ಷಕರಾದ ಎಂ.ಎಸ್. ಗಣೇಶ್, ಎನ್.ಸಿ. ದೇವಾನಂದ, ಕ್ಲೆಮೇಟ್ ಮ್ಯಾಕಲೀನ್, ಟಿ.ಎಸ್. ಚಂದ್ರಶೇಖರ, ಗೈಡ್ ಶಿಕ್ಷಕಿ ಎಂ.ಎA. ವಸಂತಿ, ಬಿ.ಬಿ. ಜಾಜಿ, ಸುಲೋಚನ ಸಿ.ಎಂ. ರಮ್ಯ ಅಲಿಮ್ಮ ಹಾಜರಿದ್ದರು.