ಅಗಸ್ತö್ಯರಿಂದ ದುಷ್ಯಂತನ ಶಾಪ ವಿಮೋಚನೆ

ಪಾಟಲೀಪುತ್ರ ದೇಶದ ದೊರೆಯ ಕೊನೆಯ ಮಗ ದುಷ್ಯಂತ. ಅವನು ಮಹಾದುಷ್ಟ. ಅವನು ಅನೇಕ ಸಣ್ಣ ಮಕ್ಕಳನ್ನು ಕೊಂದನೆAಬ ಕಾರಣ ರಾಜನು ಅವನನ್ನು ರಾಜ್ಯದಿಂದ ಹೊರಗಟ್ಟಿದನು. ದುಷ್ಯಂತನು ಕಾಡಿಗೆ ಹೋಗಿ ಅಲ್ಲಿ ಉಗ್ರರವನೆಂಬುವನ ಮಗುವನ್ನು ಹಿಡಿದು ನೀರಿನಲ್ಲಿ ಮುಳುಗಿಸಿ ಕೊಂದುಬಿಟ್ಟನು. ಅದರಿಂದ ಕೋಪಗೊಂಡ ಉಗ್ರರವನು ದುಷ್ಯಂತನನ್ನು ಶಪಿಸಲು, ಅವನು ನೀರಿನಲ್ಲಿ ಬಿದ್ದು ಸತ್ತು ಪಿಶಾಚಿಯಾದನು. ಪಿಶಾಚಿಯು ಅಗಸ್ತö್ಯರ ಬಳಿಗೆ ಬಂದು ತನ್ನನ್ನು ಮುಕ್ತಗೊಳಿಸಬೇಕೆಂದು ಬೇಡಲು ಆಗ ಅಗಸ್ತö್ಯರು ತನ್ನ ಶಿಷ್ಯನಾದ ಸುತೀಕ್ಷ÷್ಣನನ್ನು ಕರೆದು “ಎಲೈ ಸುತೀಕ್ಷ÷್ಣ, ನೀನು ಗಂಧಮಾದನ ಪರ್ವತಕ್ಕೆ ಹೋಗಿ ಅಲ್ಲಿ ಅಗ್ನಿ ತೀರ್ಥದಲ್ಲಿ ಸ್ನಾನ ಮಾಡಿ ಆ ತೀರ್ಥದಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಬಂದು ಈ ದುಷ್ಯಂತನ ಪಿಶಾಚಿಯ ಮೇಲೆ ಚಿಮಕಿಸು” ಎಂದು ಆದೇಶಿದರು. ಸುತೀಕ್ಷ÷್ಣನು ಹಾಗೆಯೇ ಮಾಡಲು ಆಗ ದುಷ್ಯಂತನ ಪಿಶಾಚಿರೂಪವು ದೂರವಾಗಿ ಅವನು ಸ್ವರ್ಗವನ್ನು ಸೇರಿದನು.

ಅಗಸ್ತö್ಯರು ಚಿನ್ನದ ಬಳೆಯನ್ನು ಸಂಪಾದಿಸಿದುದು

ಒಮ್ಮೆ ಅಗಸ್ತö್ಯರು ಒಂದು ನೂರು ಯೋಜನ ವಿಸ್ತಾರವುಳ್ಳ ಕಾಡಿಗೆ ಬಂದರು. ಅದು ನಿರ್ಜನವಾಗಿದ್ದು, ಭಯಂಕರವಾಗಿತ್ತು. ಅವರು ಸ್ವಲ್ಪ ಮುಂದೆ ಹೋಗಲು ಕೆಲವು ಗಂಧರ್ವರು ಮತ್ತು ಕೆಲವು ದೇವತಾ ಸ್ತಿçÃಯರು ಅಲ್ಲಿ ಹಾಡುತ್ತಾ-ಕುಣಿಯುತ್ತಾ ಹೋಗುತ್ತಿರುವುದನ್ನು ನೋಡಿದರು. ಗಂಧರ್ವರಲ್ಲಿ ಒಬ್ಬನು ಅಲ್ಲಿದ್ದ ಕೊಳವೊಂದರ ದಡಕ್ಕೆ ಬಂದು, ಅಲ್ಲಿಗೆ ಒಬ್ಬ ಮನುಷ್ಯನ ಹೆಣವನ್ನು ತಂದು ಯಾವ ಹೇಸಿಗೆಯೂ ಇಲ್ಲದೆ ತಿನ್ನ ತೊಡಗಿದನು. ಅನಂತರ ಅಲ್ಲಿದ್ದ ಅಗಸ್ತö್ಯರನ್ನು ಕಂಡು ಹೆದರಿ ಶರಣಾಗತನಾದನು. ಆಗ ಅಗಸ್ತö್ಯರು “ನೀನು ಏತಕ್ಕಾಗಿ ಹೆಣದ ಮಾಂಸವನ್ನು ತಿನ್ನುತ್ತಿದ್ದೀಯೆ?” ಎಂದು ಕೇಳಲಾಗಿ ಅವನು ತನ್ನ ಕಥೆಯನ್ನು ಹೀಗೆ ಹೇಳಿಕೊಂಡನು.

“ತ್ರೇತಾಯುಗದಲ್ಲಿ ವಿದರ್ಭನೆಂಬ ಒಬ್ಬ ರಾಜನು ಇದ್ದನು. ಅವನ ಮಗನೇ ನಾನು. ನನ್ನ ಹೆಸರು ಶ್ವೇತ. ನಾನು ರಾಜ್ಯವನ್ನು ಬಹುಕಾಲ ಆಳಿದ ಮೇಲೆ ಈ ಕೊಳದ ಬಳಿ ಬಂದು ತಪಸ್ಸು ಮಾಡತೊಡಗಿದೆ. ನನ್ನ ದೇಹಾವಸಾನದ ನಂತರ ನಾನು ಸ್ವರ್ಗಕ್ಕೆ ಬಂದೆ ಸ್ವÀರ್ಗದಲ್ಲಿ ನನಗೆ ಹಸಿವು ಹೆಚ್ಚಾಗಿ ನನ್ನ ಹಸಿವು ಇಂಗಲಿಲ್ಲ.

ಆಗ ನಾನು ಬ್ರಹ್ಮನ ಬಳಿ ಹೋಗಿ ಸ್ವರ್ಗದಲ್ಲಿದ್ದರೂ ನನ್ನ ಹಸಿವು ಏಕೆ ಇಂಗಿಲ್ಲ ? ಎಂದು ಕೇಳಿದೆ. ಆಗ ಬ್ರಹ್ಮನು “ನೀನು ರಾಜನಾಗಿದ್ದಾಗ ಯಾರಿಗೂ ಏನನ್ನೂ ದಾನ ಮಾಡಲಿಲ್ಲ. ಆ ಕಾರಣ ನೀನು ಸ್ವರ್ಗಕ್ಕೆ ಬಂದರೂ ನಿನ್ನ ಹಸಿವು ಇಂಗಲಿಲ್ಲ” ಎಂದು ನಿಜವಾದ ಕಾರಣವನ್ನು ತಿಳಿಸಿದನು. ಕೊನೆಗೆ ಬ್ರಹ್ಮನೇ ಇದರ ಪರಿಹಾರೋಪಾಯವನ್ನು ತಿಳಿಸಿದನು. ಅದರಂತೆ ನಾನು ಈ ಕೊಳದ ಬಳಿ ಬಂದು ಪ್ರತಿ ದಿನವೂ ಹೆಣದ ಮಾಂಸವನ್ನು ತಿನ್ನಬೇಕು. ಹತ್ತು ಸಾವಿರ ದಿವಸಗಳು ಹೀಗೆ ತಿಂದ ಮೇಲೆ ತಪಸ್ವಿ ಅಗಸ್ತö್ಯರು ಇಲ್ಲಿಗೆ ಬರುವರು. ನಾನು ಅವರಿಗೆ ಚಿನ್ನದ ಬಳೆಯೊಂದನ್ನು ಕಾಣಿಕೆಯಾಗಿ ಕೊಟ್ಟಲ್ಲಿ ನನ್ನ ಈ ಪಾಪವು ದೂರವಾಗುವುದು ಎನ್ನುವುದೇ ಆ ಪರಿಹಾರೋಪಾಯ. ಅದರಂತೆ ನೀವು ಬಂದಿರಿ, ನಾನು ಪುನೀತನಾದೆ” ಎಂದು ಹೇಳಿ ಬ್ರಹ್ಮನು ಅವನಿಗೆ ಕೊಟ್ಟಿದ್ದ ಚಿನ್ನದ ಬಳೆಯನ್ನು ಅಗಸ್ತö್ಯರಿಗೆ ಕೊಟ್ಟು ಪಾಪ ಮುಕ್ತನಾಗಿ ಸ್ವರ್ಗಕ್ಕೆ ಹೋದನು.

ಅಗಸ್ತö್ಯರು ಕುಬೇರ ಮತ್ತು ಅವನ ಸಂಗಡಿಗರಿಗೆ ಶಾಪವನ್ನು ಕೊಡುವುದು

ಪಾಂಡವರು ಕಾಡಿನಲ್ಲಿ ವಾಸ ಮಾಡುತ್ತಿರುವಾಗ ಅವರು ಅನೇಕ ಪುಣ್ಯಕ್ಷೇತ್ರಗಳಿಗೆ ಹೋಗಿ ನಂತರ ಹಿಮಾಲಯದ ಪರ್ವತದ ಬಳಿಗೆ ಬಂದರು. ಒಂದು ದಿನ ಅರ್ಜುನನು ತನ್ನ ಸೋದರರನ್ನು ಬಿಟ್ಟು ಮಹಾಮೇರು ಪರ್ವತಕ್ಕೆ ಹೋಗಿ ಶಿವನನ್ನು ಕುರಿತು ತಪಸ್ಸು ಮಾಡತೊಡಗಿದನು. ಅನೇಕ ವರ್ಷಗಳು ಕಳೆದವು. ಉಳಿದ ಪಾಂಡವರು ಆಶ್ರಮವಾಸಿಗಳಾದ ವೃಷಪರ್ವ ಮತ್ತು ಆರ್ಷ್ಟಿಷೇಣರೆಂಬುವವರ ಸಹಾಯದಿಂದ ಅರ್ಜುನನನ್ನು ಹುಡುಕುತ್ತಾ ಕುಬೇರನ ರಾಜಧಾನಿಯಾದ ಅಲಕಾಪುರಿಗೆ ಬಂದರು. ಅಲ್ಲಿ ಭೀಮನು ಕುಬೇರನ ಸೈನ್ಯವನ್ನು ನಾಶಗೊಳಿಸಿದುದಲ್ಲದೆ ಕುಬೇರನಿಗೆ ಅತ್ಯಂತ ಪ್ರಿಯನಾದ ಸ್ನೇಹಿತ ಮಣಿಮಂತ ಎಂಬುವವನನ್ನು ಕೊಂದು ಹಾಕಿದ, ಭೀಮನ ಕಾರ್ಯದಿಂದ ಪಶ್ಚಾತ್ತಾಪಗೊಂಡ ಧರ್ಮರಾಜನು, ಕುಬೇರನಲ್ಲಿ ಕ್ಷಮೆಯಾಚಿಸಿ “ಏತಕ್ಕಾಗಿ ದೇವತೆಗಳ ಶಕ್ತಿಯನ್ನೂ, ಮಾನುಷಶಕ್ತಿ ಮೀರಿ ನಿಂತಿದೆ ? ಮನುಷ್ಯನಾದ ನನ್ನ ತಮ್ಮನಿಗೆ ದೇವತೆಯಾದ ಮಣಿಮಂತನನ್ನು ಕೊಲ್ಲಲು ಹೇಗೆ ಸಾಧ್ಯವಾಯಿತು? ಎಂದು ವಿನಯದಿಂದ ಕುಬೇರನನ್ನು ಕೇಳಿದನು. ಆಗ ಕುಬೇರನು ಹೇಳಿದನು: “ಹಿಂದೊಮ್ಮೆ ನಾನು ಮತ್ತು ನನ್ನ ಸ್ನೇಹಿತ ಮಣಿಮಂತ ಇಬ್ಬರೂ ರಥದಲ್ಲಿ ಆಕಾಶ ಸಂಗೀತವನ್ನು ಹಾಡಲು ಮತ್ತು ಕೇಳಲು ಕುಶವತಿಗೆ ಹೋದೆವು. ಆಗ ಅಲ್ಲಿ ಅಗಸ್ತö್ಯರು ಕಾಲಿಂದೀ ನದಿಯ ದಡದಲ್ಲಿ ನಿಂತು ಸೂರ್ಯನನ್ನು ಉಪಾಸಿಸುತ್ತಿದ್ದರು.

ನನ್ನ ಸ್ನೇಹಿತ ಮಹಿಮಾನನು ಆಕಾಶದಿಂದಲೇ ಅಗಸ್ತö್ಯರ ತಲೆಯ ಮೇಲೆ ಉಗುಳಿದನು. ಕೋಪಗೊಂಡ ಅಗಸ್ಯರು `ಎಲೈ ಕುಬೇರನೇ, ನಿನ್ನ ಸ್ನೇಹಿತನು ನಿನ್ನ ಎದುರಿಗೇ ನನ್ನ ಮೇಲೆ ಉಗುಳಿದನು. ಅದನ್ನು ನೀನು ನೋಡಿಯೂ ಸುಮ್ಮನಿದ್ದೆ. ಅದಕ್ಕಾಗಿ ನಿನ್ನ ಸ್ನೇಹಿತ ಮಣಿಮಂತನನ್ನು ಮತ್ತು ನಿನ್ನ ಸೈನ್ಯವನ್ನು ಮನುಷ್ಯ ನೊಬ್ಬನು ಕೊಲ್ಲಲಿ. ಇವನು ಸತ್ತರೂ ನೀನು ಪಶ್ಚಾತ್ತಾಪಗೊಳ್ಳ ಬಾರದು. ಯಾವಾಗ ಮನುಷ್ಯನೊಬ್ಬನು ಬಂದು ನಿನ್ನ ಸ್ನೇಹಿತ ಮಹಿಮಾನನನ್ನೂ ನಿನ್ನ ಸೈನ್ಯವನ್ನೂ ನಾಶಮಾಡುವನೋ ಆಗ ನೀನೂ ಸಹ ಶಾಪಮುಕ್ತನಾಗುವೆ' ಎಂದು ನನಗೆ ಹೇಳಿದ್ದರು. ಅದರಂತೆ ಹೀಗಾಗಿದೆ” ಎಂದು ಕುಬೇರನು ಧರ್ಮರಾಜನಿಗೆ ತಿಳಿಸಲು, ಅಷ್ಟರಲ್ಲಿ ಎದುರಿಗಿದ್ದ ಭೀಮನನ್ನು ಕುಬೇರನು ನೋಡಿದ. ಆಗ ಕುಬೇರನ ಶಾಪವು ದೂರವಾಯಿತು. ಹೀಗೆ ಅಗಸ್ತö್ಯರ ಶಾಪವು ಕುಬೇರನನ್ನೂ ಬಿಡಲಿಲ್ಲ.

ಅಗಸ್ತö್ಯರೊಡನೆ ಇಂದ್ರನ ಸಂಘರ್ಷ

ಒಮ್ಮೆ ಅಗಸ್ತö್ಯರು ಹನ್ನೆರಡು ವರ್ಷಗಳ ಕಾಲ ನಡೆಯುವ ಒಂದು ದೊಡ್ಡ ಯಾಗವನ್ನು ಆರಂಭಿಸಿದರು. ಅನೇಕ ಋಷಿಗಳು ಈ ಯಾಗದಲ್ಲಿ ಭಾಗವಹಿಸಿದ್ದರು. ಹೀಗಾಗಿ ಇತರ ಆಶ್ರಮ ವಾಸಿಗಳಾರೂ ಯಜ್ಞಯಾಗಾದಿ ಗಳನ್ನು ಮಾಡಲಿಲ್ಲ. ಇಂದ್ರನಿಗೆ ಹವಿಸ್ಸನ್ನು ನೀಡಲಿಲ್ಲ. ಆಗ ಇಂದ್ರನು ಕೋಪಗೊಂಡು ಪ್ರಪಂಚದಲ್ಲಿ ಮಳೆ ಬೀಳದಂತೆ ಮಾಡಿದನು. ಭೂಮಿಯು ಒಣಗಿ ಬೆಳೆಗಳೆಲ್ಲ ಹಾಳಾದವು. ಆಗ ಅಗಸ್ತö್ಯರು ಯಾಗಕ್ಕೆ ಬಂದಿದ್ದ ಪ್ರತಿಯೊಬ್ಬರಿಗೂ ಯಾರಿಗೂ ತೊಂದರೆಯಾಗದAತೆ ಸಮೃದ್ಧವಾಗಿ ಉಣಬಡಿಸಿದರು. ಅಲ್ಲಿಗೆ ಬಂದಿದ್ದ ಋಷಿಗಳೆಲ್ಲ ಹೇಗೆ ಅಗಸ್ತö್ಯರು ಇಂತಹ ಸಮೃದ್ಧ ಭೋಜನವನ್ನು ನೀಡಿದರು ?” ಎಂದು ಆಶ್ಚರ್ಯಗೊಂಡರು. ಕೆಲವು ಋಷಿಗಳು ಮಳೆಯಿಲ್ಲದೆ ಕ್ಷಾಮದ ಕಾರಣ ಈ ಯಾಗವು ಹೇಗೆ ಕೊನೆಗೊಳ್ಳುವುದು ಎಂದು ಚಿಂತಿತರಾದರು. ಆಗ ಅಗಸ್ತö್ಯರು “ಎಲೈ ಋಷಿಗಳೇ! ನೀವ್ಯಾರೂ ಚಿಂತಿಸಬೇಡಿ. ಒಂದು ವೇಳೆ ಇಂದ್ರನು ಮಳೆಗರೆದರೆ ಸರಿ; ಇಲ್ಲವಾದರೆ ನಾನೇ ಇಂದ್ರನಾಗಿ ಮಳೆಗರೆದು ಎಲ್ಲರನ್ನೂ ಕಾಪಾಡುತ್ತೇನೆ” ಎಂದು ಎಲ್ಲರಿಗೂ ಹೇಳಿದರು. ಇದನ್ನು ತಿಳಿದ ಇಂದ್ರನು ಭಯಭೀತನಾಗಿ ಧಾರಾಳವಾಗಿ ಲೋಕಕ್ಕೆ ಮಳೆಗರೆಯಲು ತೊಡಗಿದನು. ಹೀಗೆ ಅಗಸ್ತö್ಯರು ಜನತೆಯ ಮಂಗಳಕ್ಕಾಗಿ ಅವಿಸ್ಮರಣೀಯವಾದ ಕಾರ್ಯವನ್ನು ಮಾಡಿದರು.

ಉರ್ವಶೀ, ಜಯಂತ ಮತ್ತು ನಾರದರಿಗೆ ಅಗಸ್ತö್ಯರ ಶಾಪ

ಒಮ್ಮೆ ಅಗಸ್ತö್ಯರು ಇಂದ್ರನ ಅತಿಥಿಯಾಗಿ ಸ್ವರ್ಗಲೋಕಕ್ಕೆ ಹೋದರು. ಅಗಸ್ತö್ಯರನ್ನು ಸಂತೋಷಪಡಿಸಲು ಇಂದ್ರನು ತನ್ನ ಆಸ್ಥಾನದಲ್ಲಿ ಉರ್ವಶಿಯ ನಾಟ್ಯವನ್ನೇರ್ಪಡಿಸಿದ್ದನು. ನಾಟ್ಯ ಮಧ್ಯದಲ್ಲಿ ಉರ್ವಶಿಯು ಅಲ್ಲಿದ್ದ ಇಂದ್ರಸುತ ಜಯಂತನನ್ನು ನೋಡುತ್ತಾ ಆತನಲ್ಲಿ ಮೋಹಿತಳಾಗಿ ತಾಳ ತಪ್ಪಿದಳು. ನಾರದನೂ ಸಹ ತನ್ನ ಮಹತೀ ಎಂಬ ವೀಣೆಯನ್ನು ಅಪಸ್ವರದಿಂದ ನುಡಿಸಿದನು. ಇದರಿಂದ ಕುಪಿತರಾದ ಅಗಸ್ತö್ಯರು ಮೂವರನ್ನೂ ಶಪಿಸಿದರು. ಅವರ ಶಾಪದ ಕಾರಣ ಜಯಂತನು ಹೂವಿನ ಮೊಗ್ಗಾದನು. ಉರ್ವಶಿಯು ಮಾಧುರೀ ಎಂಬ ಹೆಣ್ಣಾಗಿ ಭೂಲೋಕದಲ್ಲಿ ಹುಟ್ಟಿದಳು. ಮಹತೀ ಎಂಬ ನಾರದರ ವೀಣೆ ಮುಂದೆ ಭೂಲೋಕದಲ್ಲಿ ಎಲ್ಲ ಜನರ ಕೈಯಲ್ಲಿ ನುಡಿಸಲಾಗುವ ವೀಣೆಯಾಯಿತು ಎಂಬ ಕಥೆಯಿದೆ.

-ಜಿ. ರಾಜೇಂದ್ರ.