ತೀರ್ಪುಗಾರ್ತಿಯಾಗಿ ರೋಹಿಣಿ

ಮಡಿಕೇರಿ, ಜ. ೨೨: ಜನವರಿ ೨೧ ರಿಂದ ಮಸ್ಕಟ್‌ನಲ್ಲಿ ಆರಂಭಗೊAಡಿರುವ ಮಹಿಳಾ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಟೆಕ್ನಿಕಲ್ ಜಡ್ಜ್ (ತೀರ್ಪುಗಾರ್ತಿ) ಆಗಿ ಕೊಡಗಿನವರಾದ ಪುಳ್ಳಂಗಡ ರೋಹಿಣಿ ಬೋಪಣ್ಣ (ಸೌಮ್ಯ) ಅವರು ಪಾಲ್ಗೊಂಡಿದ್ದಾರೆ. ದಿ ಏಷ್ಯನ್ ಹಾಕಿ ಫೆಡರೇಷನ್ (ಎಹೆಚ್‌ಎಫ್) ಹಾಗೂ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್ (ಎಫ್‌ಐಹೆಚ್) ಮೂಲಕ ರೋಹಿಣಿ (ತಾಮನೆ: ನೆಲ್ಲಮಕ್ಕಡ) ಈ ಪಂದ್ಯಾವಳಿಯಲ್ಲಿ ಟೆಕ್ನಿಕಲ್ ಜಡ್ಜ್ ಆಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಅಂರ‍್ರಾಷ್ಟಿçÃಯ ಹಾಕಿ ಪಟು ಪುಳ್ಳಂಗಡ ಬೋಪಣ್ಣ ಅವರ ಪತ್ನಿ.