ಪೆರಾಜೆ, ಜ. ೨೨: ಇಲ್ಲಿನ ಚಿಗುರು ಯುವಕ ಮಂಡಲದ ವತಿಯಿಂದ ಸಂಘದ ಮಾಸಿಕ ಶ್ರಮದಾನವನ್ನು ವೈನಾಟ್ ಕುಲವನ್ ದೇವಾಲಯದ ಆವರಣದಲ್ಲಿ ನಡೆಸಲಾಯಿತು.

ಕಾರ್ಯದಲ್ಲಿ ಯುವಕ ಮಂಡಲದ ಅಧ್ಯಕ್ಷ ಅರುಣ ಮಜಿಕೋಡಿ, ಕಾರ್ಯದರ್ಶಿ ಭವಿತ್ ಕುಂಬಳಚೇರಿ, ಖಜಾಂಜಿ ಪವನ್ ಕುಂಬಳಚೇರಿ, ಗ್ರಾಮ ಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಶ್ರಮದಾನಕ್ಕೆ ವೈನಾಟ್ ಕುಲವನ್ ದೇವಸ್ಥಾನದ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಮತ್ತು ಕಾರ್ಯದರ್ಶಿ ವಿಶ್ವನಾಥ ಮಜಿಕೋಡಿ ಸಹಕಾರ ನೀಡಿದರು.