ನಾಪೋಕ್ಲು, ಜ. ೨೨: ನಾಪೋಕ್ಲು ಗ್ರಾಮದಲ್ಲಿ ಕಳೆದ ೧೦ ದಿನಗಳಿಂದ ೨ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಫಿ ಫಸಲನ್ನು ತಿಂದು ನಾಶಗೊಳಿಸುತ್ತಿವೆ. ಅದರೊಂದಿಗೆ ಬಾಳೆ, ಅಡಿಕೆ, ತೆಂಗು ಕೃಷಿಯನ್ನು ಹಾಳು ಮಾಡುತ್ತಿವೆ. ಈಗ ಕಾಫಿ ಕುಯ್ಯುವ ಸಮಯವಾಗಿರುವ ದರಿಂದ ಬೆಳೆಗಾರರು, ಕಾರ್ಮಿಕರು ಕಾಫಿ ತೋಟದೊಳಗೆ ತೆರಳಲು ಭಯಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಕೂಡಲೇ ಸ್ಪಂದಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ಕೈಗೊಳ್ಳಬೇಕೆಂದು ಮಡಿಕೇರಿ ತಾಲೂಕು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ಆಗ್ರಹಿಸಿದ್ದಾರೆ.