ಸುಂಟಿಕೊಪ್ಪ, ಜ. ೨೨: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್ ಬೈಲ್ ಮಂಜಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವ ಸ್ಥಾನದಲ್ಲಿ ಕೊರಗಜ್ಜ ದೈವದ ವಿಗ್ರಹ ಪ್ರತಿಷ್ಠಾಪನೆ ನೆರವೇರಿತು. ಕಾರ್ಕಳದಿಂದ ತಂದ ವಿಗ್ರಹವನ್ನು ಚಂಡೆ ವಾದÀ್ಯಗಳೊಂದಿಗೆ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ತರಲಾಯಿತು.
ಮಂಜಿಕೆರೆಯಲ್ಲಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ನೂತನ ದೇವಾಲಯವನ್ನು ಹಲವು ಬಗೆಯ ಹೂವುಗಳಿಂದ ವಿದ್ಯುತ್ ದೀಪಗಳಿಂದÀ ಅಲಂಕರಿಸಿ ಬೆಳಿಗ್ಗೆ ೫ ಗಂಟೆಯಿAದ ಗಣಪತಿಹೋಮ, ವಾಸ್ತು ಹೋಮ, ರಂಗೋಲಿ ಹೋಮದ ನಂತರ ಕೊರಗಜ್ಜ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಪೂಜಾ ಕಾರ್ಯವನ್ನು ಅರ್ಚಕರಾದ ಕೆದಕಲ್ ಕೃಷ್ಣ ಭಟ್ ಹಾಗೂ ತಂಡದವರು ನೆರವೇರಿಸಿದರು. ಈ ಶುಭ ಕಾರ್ಯದಲ್ಲಿ ಕಾನ್ಬೈಲ್, ನಾಕೂರು, ಶಿರಂಗಾಲ, ಎಮ್ಮೆಗುಂಡಿ, ಸುಂಟಿಕೊಪ್ಪ, ಸುತ್ತ ಮುತ್ತಲಿನ ಗ್ರಾಮಸ್ಥರು, ಕೊರಗಜ್ಜ ಉತ್ಸವ ಸಮಿತಿ ಸದಸ್ಯರು ಹಾಜರಿದ್ದರು.