ಗೋಣಿಕೊಪ್ಪ ವರದಿ, ಜ. ೨೨: ಬೈತೂರು ಉತ್ಸವಕ್ಕೆ ಸಾಂಪ್ರದಾಯಿಕವಾಗಿ ಅಕ್ಕಿ ಅಳೆಯುವ ಶಾಸ್ತçದ ಮೂಲಕ ಚಾಲನೆ ನೀಡಲಾಯಿತು.
ಬೈತೂರು ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ತಕ್ಕ ಪುಗ್ಗೇರ ಪೊನ್ನಪ್ಪ ಮುಂದಾಳತ್ವದಲ್ಲಿ ಪುಗ್ಗೇರ ಕುಟುಂಬಸ್ಥರು ಅಕ್ಕಿ ಅಳೆಯುವ ಪದ್ಧತಿಯಲ್ಲಿ ಪಾಲ್ಗೊಂಡರು.
ತಾ. ೨೬ ರವರೆಗೆ ನಡೆಯುವ ನಮ್ಮೆಗೆ ಕೊಡಗಿನಿಂದ ಎತ್ತ್ ಪೋರಾಟದ ಮೂಲಕ ಅಕ್ಕಿ ತೆಗೆದುಕೊಂಡು ದೇವಸ್ಥಾನ ಪ್ರದಕ್ಷಿಣೆ ಹಾಕಿ, ಸಾಂಪ್ರದಾಯಿಕ ಕೊಡವ ಉಡುಗೆ ತೊಟ್ಟು ನೈವೇದ್ಯಕ್ಕೆ ಬೇಕಾಗುವ ಅಕ್ಕಿಯನ್ನು ಅಕ್ಕಿ ಅಳೆದು ನೀಡಲಾಯಿತು.
(ಮೊದಲ ಪುಟದಿಂದ) ದುಡಿಕೊಟ್ಟ್ ಪಾಟ್ ಮೂಲಕ ಹಿರಿಯರು ದೇವರನ್ನು ಪ್ರಾರ್ಥಿಸಿದರು.
ಮೈಮೇಲೆ ದೇವರು ಬರುವ ಆಚರಣೆ ಇದ್ದರೂ ಕೂಡ, ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಿಂದ ತೆರಳುವ ಭಕ್ತರಿಗೆ ಕೊರೊನಾ ಪರೀಕ್ಷೆ, ಹಿಂತುರಿಗಿದ ನಂತರ ೭ ದಿನ ಕ್ವಾರಂಟೈನ್ ಕಡ್ಡಾಯ ಮಾಡಿರುವುದರಿಂದ ತೆರಳುವ ಭಕ್ತರ ಸಂಖ್ಯೆ ತೀರಾ ಇಳಿಮುಖವಾಗಿದೆ. ಸಾಂಪ್ರದಾಯಿಕ ಆಚರಣೆ ಮಾತ್ರ ನಡೆಸಲಾಗುತ್ತಿದೆ. ಉಳಿಯಲು ವಸತಿ ವ್ಯವಸ್ಥೆ, ಅನ್ನದಾನಕ್ಕೆ ನಿರ್ಬಂಧ ಇರುವುದರಿಂದ ದೇವರ ತಂಡ್, ಕಡತಲೆ ಇಂತಹ ವಸ್ತುಗಳನ್ನು ಪೂಜೆ ಮಾಡಿಸಿಕೊಂಡು ಬರಲಾಗುತ್ತಿದೆ.
ತಾ. ೨೩ ರಂದು (ಇಂದು) ತಕ್ಕನ ಕುಟುಂಬದ ಪೂಜೆ, ತಾ. ೨೪ ರಂದು ಪತ್ತೂಟ ಕಾರ್ಯ ನಡೆಯಲಿದೆ. ತಾ. ೨೫ ರಂದು ನೈಯಭಿಷೇಕ, ತಾ. ೨೬ ರಂದು ಆರಾಟ್ ನಮ್ಮೆ ಮೂಲಕ ಸಂಪನ್ನಗೊಳ್ಳಲಿದೆ. ಮಡಿಕೇರಿ, ಜ. ೨೨: ಕಳೆದ ಹತ್ತು ವರ್ಷಗಳಿಂದ ಪ್ರತೀ ವರ್ಷವೂ ಸಿದ್ಧಗಂಗಾ ಶ್ರೀಗಳ ಹುಟ್ಟುಹಬ್ಬ ಕಾರ್ಯಕ್ರಮವನ್ನು ಎಲ್ಲಾ ಜಾತಿ ಧರ್ಮೀಯರನ್ನು ಸೇರಿಸಿಕೊಂಡು ವಿವಿಧ ಗ್ರಾಮಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಹಾಗೂ ಕಳೆದ ಮೂರು ವರ್ಷಗಳಿಂದ ಶ್ರೀಗಳ ಪುಣ್ಯಸ್ಮರಣೆಯನ್ನು ನಡೆಸಿಕೊಂಡು ಬರುತ್ತಿರುವ ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ ಅವರನ್ನು ಕುಶಾಲನಗರದ ವಿವೇಕಾನಂದ ಪಿಯು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ, ಕಾಲೇಜಿನ ಮೇನೇಜಿಂಗ್ ಟ್ರಸ್ಟಿ ಶಂಭುಲಿAಗಪ್ಪ, ಪ್ರಾಂಶುಪಾಲರಾದ ಲಿಖಿತ, ಕ್ಲಾರಾ ರೇಷ್ಮಾ ಇದ್ದರು.