ಮಡಿಕೇರಿ, ಜ. ೨೨ : ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರು ಬಾಣೆಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿನ ಮನೆಗಳ ದುರಸ್ತಿ ಕಾರ್ಯ ಆರಂಭಗೊAಡಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾಜೀವ್ ಗಾಂಧಿ ವಸತಿ ನಿಗಮದಿಂದ ದುರಸ್ತಿ ಕಾರ್ಯಗಳು ಆರಂಭಗೊAಡಿವೆ.

೨೦೧೮ರಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗಾಗಿ ಜಂಬೂರುವಿನಲ್ಲಿ ಮನೆಗಳನ್ನು ನಿರ್ಮಿಸಿರುವ ಜಂಬೂರುವಿನ ಫೀ.ಮಾ. ಕಾರ್ಯಪ್ಪ ಬಡಾವಣೆಯಲ್ಲಿನ ಸಮಸ್ಯೆಗಳ ಬಗ್ಗೆ ತಾ. ೧೮ರಂದು ‘ಶಕ್ತಿ’ ಬೆಳಕು ಚೆಲ್ಲಿತ್ತು. ಈ ಬಗ್ಗೆ ಗಮನ ಹರಿಸಿದ್ದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಸಮಸ್ಯೆಗಳನ್ನು ಸರಿಪಡಿಸುವಂತೆ ರಾಜೀವ್‌ಗಾಂಧಿ ವಸತಿ ನಿಗಮದವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ನಿಗಮದ ಈರ್ವರು ಅಭಿಯಂತರರು ಜಂಬೂರಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಡಾವಣೆಯಲ್ಲಿರುವ ಎಲ್ಲ ಮನೆಗಳಿಗೂ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದಾರೆ.

ಇಂದು ಮನೆಗಳ ದುರಸ್ತಿ ಕಾರ್ಯ ಆರಂಭಗೊAಡಿದೆ. ಮನೆಗಳಲ್ಲಿ ಕಿತ್ತು ಹೋಗಿರುವ ಟೈಲ್ಸ್ಗಳನ್ನು ಮರು ಅಳವಡಿಸಲಾಗುತ್ತಿದೆ. ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಭೂಷಣ ಬಂದಿರುವ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸಗಳಾಗುತ್ತಿವೆ.

ಮತ್ತೆ ಕಚೇರಿ ‘ಓಪನ್..!’

ಜಿಲ್ಲಾಧಿಕಾರಿಗಳ ಅಣತಿಯಂತೆ ಇಂದು ಜಂಬೂರಿಗೆ ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ನಿಗಮದ ಅಭಿಯಂತರರೊAದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಎಲ್ಲ ಮನೆಗಳಿಗೆ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ಶೌಚ ಗುಂಡಿಯನ್ನು ಕೂಡ ಪರಿಶೀಲನೆ ಮಾಡಿದರು. ಅಲ್ಲದೆ, ಖಾಲಿ ಇರುವ ಮನೆಯಲ್ಲಿ ಕಚೇರಿ ತೆರೆದು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವದು. ಸಮಸ್ಯೆಗಳಿದ್ದಲ್ಲಿ ಸಿಬ್ಬಂದಿಗಳೊAದಿಗೆ ಹೇಳಿಕೊಳ್ಳಬಹುದು ಎಂದು ಹೇಳಿದರು. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಸರಿಪಡಿಸುವಂತೆ ಸ್ಥಳದಲ್ಲಿದ್ದ ಅಭಿಯಂತರರು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ? ಸಂತೋಷ್