ಮಡಿಕೇರಿ, ಜ. ೨೨: ಜನವರಿ ೧೫ ರಂದು ನವದೆಹಲಿಯ ಫೀ.ಮಾ. ಕಾರ್ಯಪ್ಪ ಆರ್ಮಿ ಪೆರೇಡ್ ಮೈದಾನದಲ್ಲಿ ನಡೆದ ಸೇನಾ ದಿನಾಚರಣೆ ಸಂದರ್ಭ ಕೊಡಗಿನವರಾದ ಕರ್ನಲ್ ಪಾಂಡAಡ ಎಸ್. ಭೀಮಯ್ಯ ಅವರು ತಮ್ಮ ಯೂನಿಟ್ ಪರವಾಗಿ ಬೆಸ್ಟ್ ಯೂನಿಟ್ ಮೆಡಲ್ ಸ್ವೀಕರಿಸಿದರು.

(ಮೊದಲ ಪುಟದಿಂದ) ೩ ರಾಷ್ಟಿçÃಯ ರೈಫಲ್ಸ್ ಯೂನಿಟ್ ಅನ್ನು ಕರ್ನಲ್ ಭೀಮಯ್ಯ ಅವರು ಕಮಾಂಡ್ ಮಾಡುತ್ತಿದ್ದಾರೆ. ಈ ಯೂನಿಟ್‌ಗೆ ಸೇನಾ ಮುಖ್ಯಸ್ಥರ ಬೆಸ್ಟ್ ಯೂನಿಟ್ ಮೆಡಲ್ ಲಭಿಸಿದ್ದು, ಇವರು ಜನರಲ್ ನರ್ವಾನೆ ಅವರಿಂದ ಮೆಡಲ್ ಸ್ವೀಕರಿಸಿದರು. ಇವರಿಗೆ ಈ ಹಿಂದೆ ಸೇನಾ ಮೆಡಲ್ ಕೂಡ ವೈಯಕ್ತಿಕವಾಗಿ ಲಭಿಸಿದೆ. ಭೀಮಯ್ಯ ಅವರು ಜಿಲ್ಲೆಯ ಕಡಗದಾಳು ವಿನವರಾಗಿದ್ದು, ಪಾಂಡAಡ ದಿ. ಸೋಮಣ್ಣ ಹಾಗೂ ಗೌರಮ್ಮ ದಂಪತಿಯ ಪುತ್ರರಾಗಿದ್ದಾರೆ.