ಕೂಡಿಗೆ, ಜ. ೨೦: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ, ಹೆಬ್ಬಾಲೆ ಗ್ರಾಮ ಪಂಚಾಯಿತಿ ಇವರ ಸಹಕಾರದೊಂದಿಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ವತಿಯಿಂದ ಹೆಬ್ಬಾಲೆಯ ಮಾರುಕಟ್ಟೆ ಸಭಾಂಗಣದಲ್ಲಿ ಸಂಜೀವಿನಿ ಸಂತೆ ಮೇಳ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ನೆರವೇರಿಸಿ ಮಾತನಾಡಿ, ಒಕ್ಕೂಟದ ಮೂಲಕ ಸಂಘಟನೆ ಮಾಡಿ, ತರಕಾರಿ ವಸ್ತುಗಳನ್ನು ಒಕ್ಕೂಟದ ಮುಖೇನ ಮಾರಾಟ ಮಾಡುವುರಿಂದ ಮಹಿಳೆಯರು ಸಬಲೀಕರಣ ಹೊಂದಲು ಸಹಕಾರವಾಗುತ್ತದೆ. ಅರ್ಥಿಕವಾಗಿ ಮುಂದುವರೆಯಲು ಅನುಕೂಲವಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಸಂಜೀವಿನಿ ಒಕ್ಕೂಟಕ್ಕೆ ಸೇರಿದ ೧೮ ಒಕ್ಕೂಟದ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬೆಳೆದ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳು, ತರಕಾರಿ ಮತ್ತು ತಿಂಡಿತಿನಿಸುಗಳನ್ನು ಮಾರಾಟ ಮಾಡಿದರು.
ಈ ಸಂದರ್ಭ ಕುಮಾರಿ, ಸರ್ವ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಅಸ್ಮ ತಾಲೂಕು ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕಿ ಪದ್ಮಶ್ರೀ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡಿಗೆ ವ್ಯಾಪ್ತಿಯ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.