ಪೆರಾಜೆ, ಜ. ೨೦: ಪೆರಾಜೆ ಗ್ರಾಮದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ ಅವರ ಅಧ್ಯಕ್ಷತೆಯಲ್ಲಿ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು. ಚೆಸ್ಕಾಂನ ಇಂಜಿನಿಯರ್ ಇಲಾಖಾ ಮಾಹಿತಿ ನೀಡುವಾಗ ಪಂಚಾಯಿತಿ ಮಾಜಿ ಸದಸ್ಯ ಅಬೂಬಕ್ಕರ್ ವಿದ್ಯುತ್ ಲೈನ್‌ನ ಮೇಲೆ ಇರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಕೊಡಬೇಕೆಂದರು. ಇದಕ್ಕೆ ಪಂಚಾಯಿತಿ ಸಹಕರಿಸಬೇಕೆಂದರು. ಈ ಬಗ್ಗೆ ಆಯಾ ವಾರ್ಡ್ನ ಪಂಚಾಯಿತಿ ಸದಸ್ಯರು ಜವಾಬ್ದಾರಿ ತೆಗೆದುಕೊಳ್ಳುವಂತೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸಲಹೆ ನೀಡಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆಯ ಮೈದಾನದಲ್ಲಿ ಸಾರ್ವಜನಿಕರು ಶುಲ್ಕ ಪಡೆದು ಆಟ ಆಡುವುದು, ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಮಾಡಿ ಬಂದ್ ಆಗುವುದು, ಅಲ್ಲದೆ ಶಾಲಾ ಆಸ್ತಿಗಳಿಗೆ ಹಾನಿಯಾಗುತಿತ್ತು. ಈ ಬಗ್ಗೆ ಪಂಚಾಯಿತಿಗೆ ದೂರು ಬಂದ ಹಿನ್ನೆಲೆಯಲ್ಲಿ ಆಟ ಆಡಲು ಅನುಮತಿ ನೀಡಬಾರದೆಂದು ಸ್ಥಳೀಯರಾದ ಹಮೀದ್ ಮತ್ತು ಬಾಸಿತ್ ಕೇಳಿಕೊಂಡರು. ಈ ವಿಷಯವಾಗಿ ಚರ್ಚೆ ನಡೆದು ವಿದ್ಯಾರ್ಥಿಗಳ ಹೊರತಾಗಿ ಸಾರ್ವಜನಿಕರು ಶಾಲಾ ಕನ್ನಡ ಪೆರಾಜೆಯ ಮೈದಾನದಲ್ಲಿ ಸಾರ್ವಜನಿಕರು ಶುಲ್ಕ ಪಡೆದು ಆಟ ಆಡುವುದು, ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಮಾಡಿ ಬಂದ್ ಆಗುವುದು, ಅಲ್ಲದೆ ಶಾಲಾ ಆಸ್ತಿಗಳಿಗೆ ಹಾನಿಯಾಗುತಿತ್ತು. ಈ ಬಗ್ಗೆ ಪಂಚಾಯಿತಿಗೆ ದೂರು ಬಂದ ಹಿನ್ನೆಲೆಯಲ್ಲಿ ಆಟ ಆಡಲು ಅನುಮತಿ ನೀಡಬಾರದೆಂದು ಸ್ಥಳೀಯರಾದ ಹಮೀದ್ ಮತ್ತು ಬಾಸಿತ್ ಕೇಳಿಕೊಂಡರು. ಈ ವಿಷಯವಾಗಿ ಚರ್ಚೆ ನಡೆದು ವಿದ್ಯಾರ್ಥಿಗಳ ಹೊರತಾಗಿ ಸಾರ್ವಜನಿಕರು ಶಾಲಾ ಹೇಳಿದರು. ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸ್ನೇಹ ಹಾಗೂ ಸಮಾಜ ಕಲ್ಯಾಣ ಇಲಾಖೆ, ಗ್ರಾಮ ನೈರ್ಮಲ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ನರೇಗಾ, ಜಲಜೀವನ್ ಮಿಷನ್ ಮೊದಲಾದ ಇಲಾಖೆಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಉದಯಚಂದ್ರ ಕುಂಬಳಚೇರಿ ಸ್ವಾಗತಿಸಿ, ಪಂಚಾಯಿತಿ ಸದಸ್ಯ ಬಂಗಾರಕೋಡಿ, ಎಸ್. ಸುಭಾಷ್ ಚಂದ್ರ ವಂದಿಸಿದರು.