ಮಡಿಕೇರಿ, ಜ. ೨೦: ಇತ್ತೀಚಿನ ದಿನಗಳಲ್ಲಿ ಜಾತಿ ನಿಂದನೆ ಪ್ರಕರಣವನ್ನು ದುರುಪಯೋಗಪಡಿಸಿಕೊಂಡು ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಅನೇಕ ವ್ಯಕ್ತಿಗಳು ಈ ಪ್ರಕರಣದಿಂದ ನೊಂದು ಕೊಡಗು ಯುವಸೇನೆಯ ಕಾರ್ಯಕರ್ತರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದು, ಜಾತಿ ನಿಂದನೆ ಪ್ರಕರಣವನ್ನು ದಾಖಲಿಸುವುದರಿಂದ ನೈಜ ನೊಂದ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವ ಮುನ್ನ ಕೂಲಂಕುಷವಾಗಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕೆಂದು ಈ ಮೂಲಕ ಪೊಲೀಸ್ ಇಲಾಖೆಯ ವರಿಷ್ಠರಲ್ಲಿ ಹಾಗೂ ಇನ್ನಿತರ ಅಧಿಕಾರಿಗಳಲ್ಲಿ ಕೊಡಗು ಯುವಸೇನೆಯ ಮುಖ್ಯಸ್ಥ ಕುಲದೀಪ್ ಪೂಣಚ್ಚ ಅವರು ಮನವಿ ಮಾಡಿಕೊಂಡಿರುತ್ತಾರೆ.