ಮಡಿಕೇರಿ, ಜ. ೨೦: ಮಡಿಕೇರಿಗೆ ನೀರು ಸರಬರಾಜು ಮಾಡುವ ಕೇಂದ್ರ ಕೂಟು ಹೊಳೆ ನೀರಿನ ಸರಬರಾಜು ಯಂತ್ರೋಪಕರಣದಲ್ಲಿ ತೊಂದರೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭಾ ಸದಸ್ಯರಾದ ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ಚಂದ್ರಶೇಖರ್, ಶ್ವೇತಾ ಪ್ರಶಾಂತ್, ನಗರಸಭೆ ಅಧಿಕಾರಿಗಳು ಇದ್ದರು