ಕಣಿವೆ, ಜ. ೨೦: ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಮೂಲಕ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಚುನಾಯಿತರ ಭವಿಷÀ್ಯದ ಮೇಲೆ ಕರಿ ನೆರಳು ಬಿದ್ದಿದೆ ಎಂದು ಕುಶಾಲನಗರದಲ್ಲಿ ನಾಗರಿಕರ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿ ಪ್ರಮುಖರೂ ಆದ ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ಪಟ್ಟಣ ಪಂಚಾಯಿತಿಯಾಗಿದ್ದ ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವಾಗ ಮುಳ್ಳುಸೋಗೆ ಹಾಗೂ ಗುಡ್ಡೆಹೊಸೂರು ಪಂಚಾಯಿತಿ ಗಳ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಳ್ಳಬಹುದಿತ್ತು. ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೇರಿಸುವ ಎಲ್ಲಾ ಅವಕಾಶಗಳು ಇದ್ದವು. ಹಾಗೆ ಮಾಡಿದ್ದಲ್ಲಿ ಇತ್ತ ಪುರಸಭೆ ಕುಶಾಲನಗರಕ್ಕೆ ಅತ್ತ ಪ.ಪಂ. ಆಗಬಹುದಿದ್ದ ಮುಳ್ಳುಸೋಗೆಗೂ ಸರ್ಕಾರದ ಅನುದಾನಗಳ ಮಹಾಪೂರವೇ ಹರಿದು ಬಂದು ಸಾಕಷ್ಟು ಅಭಿವೃದ್ಧಿ ಮಾಡುವ ಎಲ್ಲಾ ಅವಕಾಶಗಳು ಇದ್ದವು ಎಂದು ಶಶಿಧರ್ ಹೇಳಿದರು.
ಕುಶಾಲನಗರಕ್ಕೆ ಮುಳ್ಳುಸೋಗೆಯ ಪೂರ್ಣ ಪ್ರದೇಶವನ್ನು ಸೇರ್ಪಡೆ ಮಾಡಿಕೊಂಡದ್ದರಿAದ ಕುಶಾಲನಗರಕ್ಕೆ ಬರುವ ಅನುದಾನವನ್ನು ಮುಳ್ಳುಸೋಗೆಗೂ ಹಂಚಬೇಕಿದೆ. ಹಾಗಾಗಿ ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ಹಣಕಾಸಿನ ಕೊರತೆ ಕಾಡಲಿದೆ ಎಂದು ಹೇಳಿದ ಶಶಿಧರ್, ಶಾಸಕ ರಂಜನ್ ಕುಶಾಲನಗರವನ್ನು ಪುರಸಭೆಯಾಗಿ ಮಾಡುವ ಸಂಬAಧವಾಗಿ ಪಟ್ಟಣದ ಪ್ರಮುಖರನ್ನು ಪಕ್ಷಾತೀತವಾಗಿ ಒಳಗೊಂಡು ಪೌರಾಡಳಿತದ ಅಧಿಕಾರಿಗಳ ಸಭೆ ಕರೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಮುತ್ಸದ್ದಿತನ ಪ್ರದರ್ಶಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಇದೇ ರೀತಿ ಕುಶಾಲನಗರ ಪಟ್ಟಣದಲ್ಲಿ ಹಾದು ಹೋದ ರಾಷ್ಟಿçÃಯ ಹೆದ್ದಾರಿ ವಿಸ್ತರಣೆ ಎರಡು ಮೀಟರ್ ಕಡಿಮೆ ಆಯ್ತು. ಇದರಿಂದಾಗಿ ಇದೀಗ ಕುಶಾಲನಗರದಲ್ಲಿ ಸಾಕÀಷ್ಟು ಸಮಸ್ಯೆಯಾಗುತ್ತಿದೆ. ಕುಶಾಲನಗರದ ವಾರದ ಸಂತೆಯನ್ನು ಆರ್‌ಎಂಸಿಗೆ ಸ್ಥಳಾಂತರ ಮಾಡುವ ಮೂಲಕ ಸಂತೆ ವ್ಯಾಪಾರಿಗಳಿಗೆ ತೊಂದರೆಯಾಗಿದೆ.
ಇನ್ನು ಪಟ್ಟಣದ ಒಳಚರಂಡಿ ಕಾಮಗಾರಿ ದಶವಾರ್ಷಿಕ ಯೋಜನೆಯಾದರೂ ಕೂಡ ಪೂರ್ಣಗೊಂಡಿಲ್ಲ. ಪಂಚಾಯಿತಿಯ ವಾಣಿಜ್ಯ ಸಂಕೀರ್ಣದ ವ್ಯಾಜ್ಯವನ್ನು ಬಗೆಹರಿಸಿ ಕಟ್ಟಡ ಕಾಮಗಾರಿಗೆ ವೇಗ ಕೊಡಬಹುದಿತ್ತು. ಈ ರೀತಿ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಶಾಸಕರು ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿದ್ದ ಕುಶಾಲನಗರ ಆರ್‌ಎಂಸಿ ಅಧ್ಯಕ್ಷರೂ ಆದ ಮುಳ್ಳುಸೋಗೆ ಪಂಚಾಯಿತಿ ಸದಸ್ಯ ಎಂ.ಬಿ. ರಮೇಶ್ ಮಾತನಾಡಿ, ಮುಳ್ಳುಸೋಗೆಯಲ್ಲಿ ೨೦೧೧ರ ಜನಗಣತಿ ಪ್ರಕಾರ ೯೫೦೦ ಜನಸಂಖ್ಯೆಯನ್ನು ಹೊಂದಿರುವುದರಿAದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವ ಎಲ್ಲಾ ಅವಕಾಶಗಳಿದ್ದವು. ಹಾಗೆಯೇ ಅನುದಾನವು ಹೆಚ್ಚು ಬರುತ್ತಿತ್ತು. ಆದರೆ ಶಾಸಕರು ಮುಳ್ಳುಸೋಗೆಯ ಚುನಾಯಿತ ಸದಸ್ಯರನ್ನು ಅತಂತ್ರಗೊಳಿಸಿದ್ದಾರೆ ಎಂದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಜೆಡಿಎಸ್ ಸದಸ್ಯ ವಿ.ಎಸ್. ಆನಂದಕುಮಾರ್, ಜನಧ್ವನಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಮಹೇಶ್, ಕಾಂಗ್ರೆಸ್ ಮುಖಂಡ ಸಜಿ, ದಸಂಸ ಭೀಮವಾದದ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ನರೇಂದ್ರ ಇದ್ದರು.