ಗೋಣಿಕೊಪ್ಪಲು, ಜ.೨೦: ತಾ.೨೬ ಗಣರಾಜ್ಯೋತ್ಸವ ದಿನದಂದು ಪೊನ್ನಂಪೇಟೆ ತಾಲೂಕಿನ ತಹಶೀಲ್ದಾರ್ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಟಿ.ಎನ್.ಗೋವಿಂದಪ್ಪ ತಿಳಿಸಿದ್ದಾರೆ.
ನಗರದ ಮಹಿಳಾ ಸಮಾಜದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋವಿಂದಪ್ಪ, ಹುದಿಕೇರಿ ಪಂಚಾಯತಿ ವ್ಯಾಪ್ತಿಯ ಹೈಸೊಡ್ಲೂರು ಸರ್ಕಾರಿ ಜಾಗದಲ್ಲಿ ಕಳೆದ ಐದು ವರ್ಷಗಳಿಂದ ಆದಿವಾಸಿಗಳು ಗುಡಿಸಲು ನಿರ್ಮಿಸಿಕೊಂಡು ಕುಟುಂಬ ಸಹಿತ ವಾಸವಾಗಿದ್ದಾರೆ.
ಈ ಜಾಗವು ತಾಲೂಕು ಪಂಚಾಯಿತಿಯ ಹೆಸರಿನಲ್ಲಿದ್ದೆ. ಈ ಜಾಗದಲ್ಲಿ ಇಲ್ಲಿನ ಆದಿವಾಸಿಗಳು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ತನಕ ಅನೇಕ ರೀತಿಯ ಹೋರಾಟ ನಡೆಸಿದರು ಜಿಲ್ಲಾಡಳಿತ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಕೊಡಗು ಜಿಲ್ಲಾಡಳಿತ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಅಹವಾಲು ಸ್ವೀಕರಿಸುವ ತನಕ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.ಹೈಸೊಡ್ಲೂರು ಬೇಲಿ ವಿವಾದದಲ್ಲಿ ಇಲ್ಲಿನ ಆದಿವಾಸಿಗಳು ತಮಗಾದ ಅನ್ಯಾಯವನ್ನು ಖಂಡಿಸಿ ಠಾಣೆಯ ಮೇಟ್ಟಿಲೆರಿದ್ದಾರೆ.ಎಲ್ಲಿಯೂ ದೌರ್ಜನ್ಯ ಕಾಯ್ದೆ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಖಂಡಿಸಿ ಕೆಲವು ಸಂಘ ಸಂಸ್ಥೆಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿವೆ. ಇದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದರು.
ಸರ್ಕಾರದ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ನಾವುಗಳು ನ್ಯಾಯ ಬದ್ದ ಹೋರಾಟ ನಡೆಸುತ್ತಿದ್ದೇವೆ. ಜಾಗವನ್ನು ಜಿಲ್ಲಾಡಳಿತ ತನ್ನ ಸುಪರ್ಧಿಗೆ ತೆಗೆದುಕೊಳ್ಳುವ ಮೂಲಕ ಎಂಟು ಎಕರೆ ಜಾಗವನ್ನು ನಿವೇಶನ ರಹಿತರಿಗೆ ಹಂಚುವAತೆ ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ ಮಾತನಾಡಿ, ಆದಿವಾಸಿಗಳ ವಿರುದ್ಧ ದಾಖಲಾಗಿರುವ ಮೊಕದ್ದಮೆ ಹಿಂಪಡೆಯುವAತೆ ಆಗ್ರಹಿಸಿದರು.
ವಿಭಾಗೀಯ ಸಂಚಾಲಕ ಕೃಷ್ಣಪ್ಪ ಬೆಳ್ಳೂರು ಮಾತನಾಡಿ, ಸರ್ಕಾರದ ಗಮನ ಸೆಳೆಯುವ ಸಲುವಾಗಿ ಗಣರಾಜ್ಯೋತ್ಸವ ದಿನದಂದು ಪ್ರತಿಭಟನೆಗೆ ಮುಂದಾಗಿದ್ದೇವೆ. ಹೈಸೊಡ್ಲೂರು ಸರ್ಕಾರಿ ಜಾಗದಲ್ಲಿ ವಾಸ ಮಾಡುತ್ತಿರುವವರನ್ನು ಹತ್ತಿಕ್ಕುವ ಸಲುವಾಗಿ ಪೊಲೀಸ್ ಪ್ರಕರಣ ದಾಖಲಿಸಿರುವುದು ಖಂಡನಿಯ ಎಂದರು. ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ್ ಮಹದೇವ್, ಜಿಲ್ಲಾ ಮುಖಂಡ ಎಸ್.ಟಿ.ಗಿರೀಶ್ ಇದ್ದರು.