ಕುಶಾಲನಗರ, ಜ. ೧೯: ಕುಶಾಲನಗರ ತಾಲೂಕು ಉಪ ತಹಶೀಲ್ದಾರರನ್ನು ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ತಾಲೂಕು ಉಪ ತಹಶೀಲ್ದಾರ್ ವಿನು ಎಂಬವರು ಜಮೀನು ದಾಖಲಾತಿ ಸರಿಪಡಿಸುವ ಸಲುವಾಗಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವ ಸಂದರ್ಭ ಎಸಿಬಿ ಅಧಿಕಾರಿಗಳು ಟ್ರಾö್ಯಪ್ ಮಾಡಿ ವಶಕ್ಕೆ ಪಡೆದಿದ್ದಾರೆ.

ಕುಶಾಲನಗರ ತಾಲೂಕು ಅಂದಗೋವೆ ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬವರ ಸರ್ವೆ ನಂಬರ್ ೧೭೭ /೧೦ಪಿ೧ರಲ್ಲಿ ಇರುವ ಮೂರು ಎಕರೆ ಜಮೀನನ್ನು ದುರಸ್ತಿ ಮಾಡಿಕೊಡುವ ಸಂಬAಧ ಸುಂಟಿಕೊಪ್ಪ ನಾಡಕಚೇರಿಗೆ ೨೦೨೧ರ ಆಗಸ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಸಂಬAಧ ಜಮೀನನ್ನು ದುರಸ್ತಿ ಮಾಡಿಕೊಡಲು ಹಾಗೂ ಒತ್ತುವರಿಯಾಗಿದ್ದು ಭೂಮಿಯನ್ನು ಮಂಜೂರು ಮಾಡಿಕೊಡಲು ಅಧಿಕಾರಿ

(ಮೊದಲ ಪುಟದಿಂದ) ೧೪.೫ ಲಕ್ಷ ರೂ.ಗಳ ಬೇಡಿಕೆ ಇಟ್ಟು ೩.೫ ಲಕ್ಷ ಮುಂಗಡ ಹಣ ಕೊಡುವಂತೆ ಒತ್ತಾಯಿಸಿದ್ದರು ಎಂದು ದೂರುದಾರ ಅಂದಗೋವೆ ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬವರು ಎಸಿಬಿಗೆ ದೂರು ಸಲ್ಲಿಸಿದ್ದರು. ಈ ಸಂಬAಧ ಎಸಿಬಿ ಅಧಿಕಾರಿಗಳು ಬುಧವಾರ ಟ್ರಾö್ಯಪ್ ಕಾರ್ಯಾಚರಣೆ ಮಾಡಿದ್ದು ಆರೋಪಿತ ಸರ್ಕಾರಿ ಅಧಿಕಾರಿಗಳು ಅವರು ತಾಲೂಕು ಕಚೇರಿ ಸಮೀಪದ ಕ್ಯಾಂಟೀನ್ ಒಂದರ ಬಳಿ ಬೆಳ್ಳಿಯಪ್ಪ ಅವರಿಂದ ರೂ ೫೦ ಸಾವಿರ ಲಂಚದ ಹಣವನ್ನು ಸ್ವೀಕರಿಸಿದ್ದು ಈ ಸಂದರ್ಭ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಕ್ಷಣ ಅಧಿಕಾರಿ ವಿನು ಅವರನ್ನು ವಶಕ್ಕೆ ತೆಗೆದುಕೊಂಡ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರನ್ನು ದಸ್ತಗಿರಿ ಮಾಡಿ ಅವರಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಎಸ್. ತಿಪ್ಪಣ್ಣನವರ್, ಇನ್ಸ್ಪೆಕ್ಟರ್‌ಗಳಾದ ಕುಮಾರ್ ಮತ್ತು ಹರೀಶ್ ಹಾಗೂ ಸಿಬ್ಬಂದಿಗಳಾದ ದಿನೇಶ್, ಸುರೇಶ್, ವಿಶ್ವನಾಥ್, ಲೋಹಿತ್, ದೀಪಿಕಾ, ವಿಜಯಕುಮಾರ್ ಪಾಲ್ಗೊಂಡಿದ್ದರು.