ಮಡಿಕೇರಿ, ಜ. ೧೯: ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಂಸ್ಟೇ ಹೊಟೇಲ್ ಮತ್ತು ರೆಸಾರ್ಟ್ಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸೂಚನೆ ನೀಡಿದ್ದಾರೆ. ರೆಸಾರ್ಟ್, ಹೊಟೇಲ್ ಹಾಗೂ ಹೋಂಸ್ಟೇಗಳಲ್ಲಿನ ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಕೋವಿಡ್ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನಿಯಮಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ವಿವರ ಇಂತಿದೆ.

೧೫ ದಿನಗಳಿಗೆÀ ಒಮ್ಮೆ ತಮ್ಮ ಎಲ್ಲಾ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ೨ ಡೋಸ್ ಕೋವಿಡ್ ಲಸಿಕೆಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ವಾಸ್ತವ್ಯಕ್ಕೆ ಬರುವ ಪ್ರವಾಸಿಗರು, ಗ್ರಾಹಕರು ೨ ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರುವ ಬಗ್ಗೆ ದಾಖಲೆಯನ್ನು ಪಡೆದು ಕೊಳ್ಳಬೇಕು. ಒಂದು ವೇಳೆ ಗ್ರಾಹಕರು ಕೋವಿಶೀಲ್ಡ್ ಒಂದು ಲಸಿಕೆಯನ್ನು ಪಡೆದು ೮೪ ದಿನಗಳು ಕಳೆಯದೇ ಇದ್ದಲ್ಲಿ ಅವರನ್ನು ಉಳಿಸಿ ಕೊಳ್ಳಬಹುದು.

ಈಜು ಕೊಳ ಮತ್ತು ಸ್ಪಾ (ಮಸಾಜ್ ಕೇಂದ್ರ) ಕೇಂದ್ರಗಳಿಗೆ ಸಂಬAಧಿಸಿದAತೆ ಕೋವಿಡ್‌ನ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೋಂ ಸ್ಟೇ, ಹೊಟೇಲ್ ಮತ್ತು ರೆಸಾರ್ಟ್ ಸಿಬ್ಬಂದಿಗಳು ಪಾಸಿಟಿವ್ ಆದಲ್ಲಿ ಅವರುಗಳಿಗೆ ಪ್ರತ್ಯೇಕವಾದ ಐಸೋಲೇಷನ್ ವಿಭಾಗವನ್ನು ತೆರೆದು ಅವರ ಯೋಗ ಕ್ಷೇಮದ ಬಗ್ಗೆ ಮಾಲೀಕರು, ವ್ಯವಸ್ಥಾಪಕರು ಜವಾಬ್ದಾರಿ ತೆಗೆದುಕೊಳ್ಳಬೇಕು

ಮತ್ತು ಜಿಲ್ಲಾ ಕೋವಿಡ್ ವಾರ್ ರೂಮ್‌ಗೆ ಮಾಹಿತಿ ನೀಡಬೇಕು. ತೀವ್ರ ತರಹದ ರೋಗ ಲಕ್ಷಣಗಳು ಕಂಡುಬAದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು.

ಮಹಾರಾಷ್ಟç, ಕೇರಳ ಹಾಗೂ ಗೋವಾಗಳಿಂದ ಪ್ರವಾಸಿಗರು, ಗ್ರಾಹಕರು ವಾಸ್ತವ್ಯಕ್ಕೆ ಆಗಮಿಸಿದರೆ, ಅವರಿಂದ ೭೨ ಗಂಟೆಗಳ ಆರ್‌ಟಿಪಿಸಿಆರ್ ಅವಧಿಯೊಳಗಿನ ನೆಗೆಟಿವ್ ವರದಿಗಳನ್ನು ಪಡೆದು ಕೊಳ್ಳಬೇಕು. ಒಂದು ವೇಳೆ ಗ್ರಾಹಕರು ಜಿಲ್ಲೆಗೆ ಬಂದ ನಂತರ ಪರೀಕ್ಷೆಗೆ ಒಳಪಟ್ಟು ಅವರುಗಳು ಪಾಸಿಟಿವ್ ಆದಲ್ಲಿ ಸಂಪರ್ಕಕ್ಕೆ ಬಂದಿರುವ ಎಲ್ಲಾ ಪ್ರವಾಸಿಗರು, ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಈ ಎಲ್ಲಾ ಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅನುಸರಿಸಲು ಸೂಚಿಸಲಾಗುತ್ತಿದ್ದು, ಅನುಸರಿಸದೇ ಇರುವುದು ಕಂಡು ಬಂದಲ್ಲಿ ಜಿಲ್ಲಾಡಳಿತದಿಂದ ಕಾನೂನು

ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.