ಗೋಣಿಕೊಪ್ಪ ವರದಿ, ಜ. 18: ನೊಕ್ಯ ಗ್ರಾಮದಲ್ಲಿ ನಡೆಯುತ್ತಿರುವ ನಿರಂತರ ಕಾಡಾನೆ ಹಾವಳಿ ನಿಯಂತ್ರಿಸಲು ಸಾಮೂಹಿಕ ನಾಯಕತ್ವದ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.

ಗ್ರಾಮದ ಕೋಳೇರ ರಾಣಿ ಮಂದಣ್ಣ ಅವರಿಗೆ ಸೇರಿದ ತೋಟದಲ್ಲಿ ಅಡಕೆ ಮರಗಳನ್ನು ನಾಶ ಮಾಡಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಒತ್ತಾಯಿಸಿದರು. 15 ದಿನಗಳಿಂದ ಸುಮಾರು 200 ಕ್ಕೂ ಹೆಚ್ಚು ಅಡಕೆ ಮರ ನಾಶವಾಗಿದ್ದರೂ, ಅರಣ್ಯ ಇಲಾಖೆ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ. ಮತ್ತಿಗೋಡು ಆರ್‍ಎಫ್‍ಒ ಕಿರಣ್ ಪರಿಶೀಲಿಸಿ ತೆರಳಿದವರು, ಯಾವ ಸ್ಪಂದನ ನೀಡಿಲ್ಲ ಎಂದು ಆರೋಪಿಸಿದರು.

15 ದಿನಗಳಿಂದ ನಿರಂತರ ದಾಳಿ ನಡೆಯುತ್ತಿದೆ. ಇಲಾಖೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಫಸಲು ಬಿಡುತ್ತಿರುವ ಅಡಕೆ ಮರ ನಾಶದಿಂದ ಆರ್ಥಿಕ ನಷ್ಟದೊಂದಿಗೆ ಮರ ಕೂಡ ಕಳೆದುಕೊಳ್ಳುವಂತಾಗಿದೆ. ತಕ್ಷಣ ಪರಿಹಾರ ನೀಡುವಂತಾಗಬೇಕು ಎಂದು ಒತ್ತಾಯಿಸಲಾಯಿತು.

ಸಂಘದ ಉಪಾಧ್ಯಕ್ಷ ಚೆಪ್ಪುಡೀರ ಕಾರ್ಯಪ್ಪ, ಮುಖಂಡರಾದ ರಾಯಲ್, ಮಹೇಶ್, ರವಿ ಇದ್ದರು.