ಮಡಿಕೇರಿ, ಜ. 18: ಅಲ್ಲಾರಂಡ ರಂಗ ಚಾವಡಿ ಹಾಗೂ ಸಿರಿಗನ್ನಡ ವೇದಿಕೆ ವತಿಯಿಂದ ಚಂಪಾ ನೆನಪು ಮೆಲುಕು ಎಂಬ ಕಾರ್ಯಕ್ರಮ ‘ಗೂಗಲ್ ಮೀಟ್’ ಮೂಲಕ ನಡೆಯಲಿದೆ.

ತಾ. 19 ರಂದು (ಇಂದು) ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಾಹಿತಿ ಕೆ.ಆರ್. ವಿದ್ಯಾಧರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಚಾರವಾದಿ ಅಗ್ನಿ ಶ್ರೀಧರ್ ಉದ್ಘಾಟಿಸಲಿದ್ದಾರೆ.

ಚಂಪಾ-ಸಮಕಾಲೀನ ಸ್ಪಂದನ ಎಂಬ ವಿಚಾರದಲ್ಲಿ ಸಾಹಿತಿ ಯೋಗೇಶ್ ಮಾಸ್ಟರ್, ನಾ ಕಂಡ ಚಂಪಾ ಅಕ್ಷರಗಳು ವಿಷಯ ಕುರಿತು ಸಾಹಿತಿ ಹಾಗೂ ಹೋರಾಟಗಾರ ಮಂಜುನಾಥ ಅದ್ದೆ, ಕೊಡಗಿನಲ್ಲಿ ಚಂಪಾ ಹೆಜ್ಜೆ ಗುರುತುಗಳು ಎಂಬ ವಿಷಯ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಲಿದ್ದಾರೆ.

ಭಾಗವಹಿಸಲು ಇಚ್ಚಿಸುವವರು ‘ಜಿgh-eಣಣರಿ-svi’ ಲಿಂಕ್ ಬಳಸಿ ಪಾಲ್ಗೊಳ್ಳಬಹುದಾಗಿದೆ ಎಂದು ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದ್ದಾರೆ.