ಮಡಿಕೇರಿ, ಜ. ೧೭-ಸಮರ್ಥ ಕನ್ನಡಿಗರು ಸಂಸ್ಥೆಯ ಪೊನ್ನಂಪೇಟೆ ಘಟಕವು ನಾಡು-ನುಡಿ ಬಗ್ಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ.
ಭರತನಾಟ್ಯ ಸ್ಪರ್ಧೆಯಲ್ಲಿ ಆರು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಲಾನ್ಯ ದೇಚಕ್ಕ ವಿಶೇಷ ಬಹುಮಾನ ಪಡೆದುಕೊಂಡರೆ, ಏಳರಿಂದ ಹತ್ತು ವರ್ಷದ ವಿಭಾಗದಲ್ಲಿ ತನಿಷಾ ಕೆ.ಕೆ. (ಪ್ರಥಮ), ತನಿಷ್ಕ ಟಿ. ಎಚ್. (ದ್ವಿತೀಯ), ದಿಶಿಕ ಸಿ.ಹೆಚ್. (ತೃತೀಯ), ಹತ್ತರಿಂದ ಹನ್ನೆರಡು ವರ್ಷದ ವಿಭಾಗದಲ್ಲಿ ಭೂಮಿಕಾ ಕೆ.ಕೆ. (ಪ್ರ), ಭೂಮಿಕಾ ಯು.ಆರ್. (ದ್ವಿ), ಹನ್ನೆರಡರಿಂದ ಹದಿನೆಂಟು ವರ್ಷದ ವಿಭಾಗದಲ್ಲಿ ಗ್ರೀಷ್ಮ ಎನ್. ಜಿ. (ಪ್ರ), ಪ್ರಗತಿ (ದ್ವಿ) ಸ್ಥಾನ ಪಡೆದುಕೊಂಡರು.
ಭರತನಾಟ್ಯ ಸಮೂಹ ನೃತ್ಯ ವಿಭಾಗದಲ್ಲಿ ನಾಟ್ಯ ಸಂಕಲ್ಪ ನೃತ್ಯ ಶಾಲೆ (ಪ್ರ), ಕನ್ನಡ ನಾಡು -ನುಡಿ ನೃತ್ಯದಲ್ಲಿ ವಿಂಗ್ಸ್ ಆಫ್ ಪ್ಯಾಶನ್ ತಂಡ (ಪ್ರ) ವಿಜೇತವಾಯಿತು.
ಆರು ವರ್ಷದ ಒಳಗಿನ ಗಾಯನ ಸ್ಪರ್ಧೆಯಲ್ಲಿ ಲವೀನ್, ಸುಮೇಧಾ, ಪ್ರಥಮ್ ಕಿರಣ್, ಏಳರಿಂದ ಹನ್ನೆರಡು ವರ್ಷದ ವಿಭಾಗದಲ್ಲಿ ಜಶ್ಮಿತಾ, ಸಾಕ್ಷಿ , ಪ್ರದ್ಯೋತ್ ಕಿರಣ್, ಹನ್ನೆರಡು ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅನ್ವಿತ್, ವೈಷ್ಣವಿ., ವೀಣಾ ಗಣಪತಿ ಹೆಗ್ಗಡೆ ಕ್ರಮವಾಗಿ ಪ್ರಥಮ ದ್ವಿತೀಯ, ತೃತೀಯ ಸ್ಥಾನ ಗಳಿಸಿಕೊಂಡರು.
ಏಕಪಾತ್ರಾಭಿನಯ ಆರು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಜಶಿಕ ವಿಶೇಷ ಬಹುಮಾನ, ಏಳರಿಂದ ಹನ್ನೆರಡು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಋಷಿಕ ಎಂ (ಪ್ರ), ಭೂಮಿಕಾ ಯು. ಆರ್ (ದ್ವಿ), ಪ್ರಥಮ್ ಕಿರಣ್ (ತೃ), ಕನ್ನಡ ನಾಡು -ನುಡಿ ನೃತ್ಯ.ದಲ್ಲಿ ಧೃತಿ ಪೂಜಾರಿ (ಪ್ರ), ಜಶಿಕ (ದ್ವಿ), ಏಳರಿಂದ ಹನ್ನೆರಡು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಲೇಖನ ಅಕ್ಕಮ್ಮ ಮತ್ತು ಭೂಮಿಕಾ (ಪ್ರ), ರಿಷಿಕ (ದ್ವಿ) ನಿಹಾರಿಕ, ಅಮೃತ (ತೃ) ಸ್ಥಾನ ಪಡೆದುಕೊಂಡರು.
ಚರಿತ ಹಾಗೂ ಧನ್ಯ ಅವರು ಈ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಸಮರ್ಥ ಕನ್ನಡಿಗರು ಸಂಸ್ಥೆಯ ಪೊನ್ನಂಪೇಟೆ ಘಟಕದ ಸಂಚಾಲಕಿ ಪ್ರೇಕ್ಷ ಸ್ಪರ್ಧಾ ಕಾರ್ಯಕ್ರಮಗಳನ್ನು ನಿªðಹಿಸಿದರು ಎಂದು ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷಿö್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.