ಗೋಣಿಕೊಪ್ಪಲು, ಜ. ೧೬: ಕಳೆದ ೬ ದಿನಗಳಿಂದ ಹುಲಿಯ ಪತ್ತೆಗಾಗಿ ಅರಣ್ಯ ಸಿಬ್ಬಂದಿಗಳು ಕೂಂಬಿAಗ್ ಕಾರ್ಯಾಚರಣೆ ನಡೆಸಿದರಾದರೂ ಯಾವುದೇ ಕುರುಹು ಕಂಡುಬರುತ್ತಿಲ್ಲ.

ಹುಲಿ ಸಂಚಾರದ ಬಗ್ಗೆ ಹಲವು ಭಾಗಗಳಲ್ಲಿ ಕ್ಯಾಮರಾ ಇಟ್ಟ ಸಿಬ್ಬಂದಿಗಳಿಗೆ ಅಲ್ಲಿಯೂ ಯಾವುದೇ ಪ್ರಯೋಜನ ಕಂಡುಬರಲಿಲ್ಲ.

ಹೀಗಾಗಿ ಅರಣ್ಯ ಸಿಬ್ಬಂದಿಗಳಿಗೆ, ವಿವಿಧ ಕಾರ್ಯಾಚರಣೆ ತಂಡಗಳು ನಿರಾಶರಾದರು. ಕಾಡು, ಮೇಡು ಕುರುಚಲು ಗಿಡಗಳನ್ನು ದಾಟಿ ಉರಿ ಬಿಸಿಲನ್ನು ಲೆಕ್ಕಿಸದೆ ಹುಲಿಯ ಜಾಡು ಹರಸಿ ತೆರಳುತ್ತಿರುವ ತಂಡಗಳಿಗೆ ಯಾವುದೇ ಗುರುತುಗಳು ಪತ್ತೆಯಾಗುತ್ತಿಲ್ಲ.

ದಿನ ಪೂರ್ತಿ ಕೂಂಬಿAಗ್ ಕಾರ್ಯಾಚರಣೆ ನಡೆಸಿದರೂ ಹುಲಿಯ ಹೆಜ್ಜೆ ಗುರುತುಗಳು ಸಿಗದೇ ಕ್ಯಾಂಪ್‌ಗೆ ಬರಿಗೈಯಲ್ಲಿ ವಾಪಾಸು ಆಗುತ್ತಿದ್ದಾರೆ. ಹೀಗಾಗಿ ಹುಲಿಯು ಮತ್ತೆ ಅರಣ್ಯದತ್ತ ಸಾಗಿರುವ ಬಗ್ಗೆ ಇಲಾಖೆಯ ಅಧಿಕಾರಿಗಳಾದ ಡಿಎಫ್‌ಓ ಚಕ್ರಪಾಣಿ ರವರಿಗೆ ಕಾರ್ಯಾಚರಣೆ ತಂಡ ಸಮಗ್ರ ವಿವರವನ್ನು ಒದಗಿಸಿದ್ದಾರೆ.

ಕ್ಯಾಮರಾಕ್ಕೆ ಹುಲಿಯ ಚಲನವಲನಗಳು ಸೆರೆಯಾಗುತ್ತಿಲ್ಲ. ಇದರಿಂದಾಗಿ ಹುಲಿಯು ತನ್ನ ದಿಕ್ಕು ಬದಲಾಯಿಸಿರುವ ಸಾಧ್ಯತೆ ಇದೆ. ಸಾಕಾನೆಗಳ ಕಾರ್ಯಾಚರಣೆಯಿಂದ ಹುಲಿಯೂ ಗೊಂದಲಕ್ಕೀಡಾಗಿ ಸ್ಥಳ ಬದಲಾವಣೆ ಮಾಡಿರಲುಬಹುದು. ಹೀಗಾಗಿ ತಾತ್ಕಾಲಿಕವಾಗಿ ಸಾಕಾನೆಗಳ ಸಹಾಯದಿಂದ ನಡೆಸುವ ಕಾರ್ಯಾಚರಣೆ ನಿಲ್ಲಿಸಿ, ಕಾಲ್ನಡಿಗೆ ಯಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯ ಬಿದ್ದಲ್ಲಿ ಆನೆಗಳ ಸಹಾಯ ಪಡೆಯಲು ತಂಡಕ್ಕೆ ಅರಣ್ಯಾಧಿಕಾರಿ ಚಕ್ರಪಾಣಿ ನಿರ್ದೇಶನ ನೀಡಿದ್ದಾರೆ.

ಒಂದು ವೇಳೆ ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿದ್ದಲ್ಲಿ ಕಾರ್ಯಾಚರಣೆ ತಂಡ ದಿನದ ಯಾವುದೇ ಸಮಯದಲ್ಲಿ ಘಟನೆ ಸ್ಥಳಕ್ಕೆ ತೆರಳಲು ಸನ್ನದ್ದರಾಗಿರುವಂತೆ ಸೂಚನೆ ನೀಡಿದರು. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ತಿತಿಮತಿ ಕ್ಯಾಂಪ್‌ನಿAದ ಕರೆಸಿಕೊಳ್ಳಲು ಎಸಿಎಫ್ ಉತ್ತಪ್ಪ ನವರಿಗೆ ಚಕ್ರಪಾಣಿ ಸೂಚನೆ ನೀಡಿದ್ದಾರೆ

ಕಳೆದ ಆರು ದಿನಗಳಿಂದ ತೂಚಮಕೇರಿ ಶಾಲೆಯ ಬಳಿ ೫೦ಕ್ಕೂ ಹೆಚ್ಚಿನ ಸಿಬ್ಬಂದಿಗಳು, ಎರಡು ಸಾಕಾನೆಗಳು, ವೈದ್ಯರು, ಅರವಳಿಕೆ ತಜ್ಞರು ಬೀಡು ಬಿಟ್ಟಿದ್ದಾರೆ. ಸಿಬ್ಬಂದಿ ಗಳೆಲ್ಲರೂ ಸಂಕ್ರಾAತಿಯ ಹಬ್ಬವನ್ನು ಮನೆಯಲ್ಲಿ ಆಚರಿಸಲಾಗದೇ ಕ್ಯಾಂಪ್‌ನಲ್ಲಿಯೇ ಎಳ್ಳು ಬೆಲ್ಲ ಸೇವಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ದ. ಕೊಡಗಿನ ಜನರನ್ನು ಭಯ ಭೀತಗೊಳಿಸಿದ್ದ ಹುಲಿಯ ಸಂಚಾರ ಇದೀಗ ಕಂಡು ಬಾರದೇ ಇರುವುದರಿಂದ ಈ ಭಾಗದ ಗ್ರಾಮಸ್ಥರಿಗೆ ಕೊಂಚ ನೆಮ್ಮದಿ ತಂದಿದೆ.

ತಿತಿಮತಿ ವಲಯದ ಎಸಿಎಫ್ ಉತ್ತಪ್ಪ, ನಾಗರಹೊಳೆ ರಾಷ್ಟಿçÃಯ ಉದ್ಯಾನದ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್.ಎಫ್.ಓ. ರಾಜಪ್ಪ, ದಿವಾಕರ್ ತಿತಿಮತಿ ಆರ್.ಎಫ್.ಓ. ಅಶೋಕ್ ಹುನಗುಂದ ಮುಂಡ್ರೋಟ್ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಆನೆ ಮಾವುತರು,ಕಾವಾಡಿಗರು ಕೂಂಬಿAಗ್ ತಂಡವನ್ನು ಮುನ್ನೆಡೆಸುತ್ತಿರುವ ಉಪವಲಯದ ಅರಣ್ಯಾಧಿಕಾರಿ ದಿವಾಕರ್, ಗಣೇಶ ಶೇಟ್, ಸಿ.ಡಿ. ಬೋಪಣ್ಣ, ತಾಂತ್ರಿಕ ಸಹಾಯಕ ಅರಣ್ಯಾಧಿಕಾರಿಗಳಾದ ರಕ್ಷಿತ್, ಸಚಿನ್ ಚೌಗಾಲ ಹಾಗೂ ಸಿಬ್ಬಂದಿಗಳು ಸೇರಿದಂತೆ ೫೦ ಸಿಬ್ಬಂದಿಗಳು ಕ್ಯಾಂಪ್‌ನಲ್ಲಿದ್ದಾರೆ.-ಹೆಚ್‌ಕೆ. ಜಗದೀಶ್