ಮಡಿಕೇರಿ, ಜ. ೧೬: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ ಅನ್ವಯ ಇಲಾಖೆ ಆಡಳಿತಕ್ಕೆ ಒಳಪಟ್ಟ ಜಿಲ್ಲೆಯ ೨ ದೇವಾಲಯಗಳು ಸೇರಿದಂತೆ ರಾಜ್ಯದ ೩೯ ದೇವಾಲಯಗಳಿಗೆ ೯ ಸದಸ್ಯರ ವ್ಯವಸ್ಥಾಪನಾ ಸಮಿತಿಯನ್ನು ೩ ವರ್ಷಗಳ ಅವಧಿಗೆ ರಚಿಸಬೇಕಾಗಿದ್ದು, ಈ ಹಿನ್ನೆಲೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಮಡಿಕೇರಿಯ ಓಂಕಾರೇಶ್ವರ ದೇವಾಲಯ ಹಾಗೂ ಪಾಡಿ ಇಗ್ಗುತ್ತಪ್ಪ ದೇವಾಲಗಳ ವ್ಯವಸ್ಥಾಪನಾ ಸಮಿತಿ ರಚನೆ ಸಂಬAಧ ಅರ್ಜಿ ಆಹ್ವಾನಿಸಿದೆ. ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಜನಾಂಗಕ್ಕೆ ಸೇರಿದ ಕನಿಷ್ಟ ಓರ್ವ ಸದಸ್ಯ ಇರತಕ್ಕದ್ದು. ಇಬ್ಬರು ಮಹಿಳೆಗೆ ಮೀಸಲಾತಿ ಇದೆ. ಅರ್ಜಿಗಳನ್ನು ೧೫ ದಿನದೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.