ಮಡಿಕೇರಿ, ಜ. ೧೬: ನಗರದ ಇಸಿಹೆಚ್‌ಎಸ್ ಪಾಲಿಕ್ಲಿನಿಕ್ ತಾ. ೨೬ ರಂದು ಗಣರಾಜ್ಯೋತ್ಸವ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. ೨೭ ರಿಂದ ೨೯ರ ವರೆಗೆ ದಂತ ವೈದ್ಯರು ಲಭ್ಯವಿರುವುದಿಲ್ಲ.

ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಯಾರು ಹೊಸ ೬ ಹೆಚ್‌ಕೆಬಿ ಕಾರ್ಡ್ಗೆ ನೋಂದಾವಣೆ ಮಾಡಿದ್ದೀರ ಎಲ್ಲರೂ ಇಸಿಹೆಚ್‌ಎಸ್‌ಗೆ ಬಂದು ತಮ್ಮ ಕಾರ್ಡ್ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಕೋವಿಡ್ ೧೯ ಹೆಚ್ಚಾಗುತ್ತಿರುವ ಕಾರಣ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ದೈನಂದಿನ ಔಷಧಿಗಳನ್ನು ಏಪ್ರಿಲ್ ೩೦ರ ತನಕ ಒಂದೇ ಬಿಲ್ಲಿನಲ್ಲಿ ಮಾತ್ರೆಗಳನ್ನು ಹೊರಗಡೆಯಿಂದ ತೆಗೆದುಕೊಂಡು ಕ್ಲೇಮ್ ಮಾಡಬಹುದು ಅಥವಾ ಇಸಿಹೆಚ್‌ಎಸ್‌ಗೆ ಬಂದು ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.