ಪೊನ್ನಂಪೇಟೆ, ಜ.೧೬: ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕವು ಕಳೆದ ೨೦೨೧ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿಗಾಗಿ ಶೇ.೧೦೦% ಕಾರ್ಯದಕ್ಷತೆಯ ಘಟಕ (೧೦೦% ಇಜಿಜಿiಛಿieಟಿಛಿಥಿ) ಎಂಬ ಪ್ರತಿಷ್ಠಿತ ಮನ್ನಣೆಗೆ ಪಾತ್ರವಾಗಿದೆ.
ಎಲ್ಲಾ ವಿಭಾಗಗಳಲ್ಲಿರುವ ನಿರ್ದಿಷ್ಟ ಮಾರ್ಗಸೂಚಿಯಂತೆ ವರ್ಷವಿಡಿ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಿ , ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಜಾರಿಗೊಳಿಸುವ ಘಟಕಗಳಿಗೆ ಜೆಸಿಐ ಭಾರತದ ರಾಷ್ಟಿçÃಯ ಪ್ರಧಾನ ಕೇಂದ್ರದಿAದ ನೀಡಲಾಗುವ ಈ ಮನ್ನಣೆಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕ ತನ್ನ ಮುಡಿಗೇರಿಸಿಕೊಂಡಿದೆ. ಘಟಕ ಆರಂಭಗೊAಡ ೧೧ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶೇ.೧೦೦% ಕಾರ್ಯದಕ್ಷತೆಯ ಘಟಕ ಎಂಬ ಈ ಖ್ಯಾತಿಗೆ ಒಳಗಾಗಿದೆ. ಸದರಿ ಯೋಜನೆಯಡಿಯಲ್ಲಿರುವ ಮಾನದಂಡಗಳ ಒಟ್ಟು೧೩೮ ಅಂಕಗಳ ಪೈಕಿ ಕಡ್ಡಾಯವಾಗಿರುವ ೯೦ ಅಂಕಗಳನ್ನು ಸೇರಿದಂತೆ ೧೨೪ ಅಂಕಗಳನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕವು ಕಳೆದ ಸಾಲಿನಲ್ಲಿ ಸಂಪಾದಿಸಿಕೊAಡಿತ್ತು.
ಬೆAಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಹೋಟೆಲ್ ಮ್ಯಾರಿಯೇಟ್ ನಲ್ಲಿ ಇತ್ತೀಚಿಗೆ ನಡೆದ ಜೆಸಿಐ ಭಾರತದ ೬೬ನೇ ರಾಷ್ಟಿçÃಯ ಮಹಾಧಿವೇಶನದಲ್ಲಿ ಘಟಕವನ್ನು ಪ್ರತಿನಿಧಿಸಿ ಪಾಲ್ಗೊಂಡಿದ್ದ ಸ್ಥಾಪಕಾಧ್ಯಕ್ಷÀ ರಫೀಕ್ ತೂಚಮಕೇರಿ ಅವರು ೨೦೨೧ನೇ ಸಾಲಿನ ಜೆಸಿಐ ರಾಷ್ಟಾçಧ್ಯಕ್ಷರಾಗಿದ್ದ ಸೆನೆಟರ್ ರಾಖಿ ಜೈನ್ ಅವರಿಂದ ಈ ಕುರಿತ ವಿಶೇಷ ಮನ್ನಣೆಯ ಪಾರಿತೋಷಕವನ್ನು ಪಡೆದುಕೊಂಡರು.