ವೀರಾಜಪೇಟೆ, ಜ. ೧೬: ಕಾರು ಚಾಲಕನೋರ್ವ ಆಟೋಗೆ ಡಿಕ್ಕಿ ಪಡಿಸಿ ರಸ್ತೆ ಬದಿಯಲ್ಲಿದ ಅಂಗಡಿಯ ಮೇಲೆ ಕಾರು ಚಲಾಯಿಸಿ ಅಂಗಡಿ ಮಾಲೀಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮೀನುಪೇಟೆಯಲ್ಲಿ ನಡೆದಿದೆ.
ತಾ. ೧೩ ರ ಸಂಜೆ ನಗರದ ಮಲಬಾರ್ ರಸ್ತೆಯ ಮೀನುಪೇಟೆಯಲ್ಲಿ ಪೂಣಚ್ಚ ಎಂಬವರು ಕಾರಿನಲ್ಲಿ ತೆರಳುತ್ತಿರುವಾಗ ಪೆರುಂಬಾಡಿ ಗ್ರಾಮದ ನಿವಾಸಿ ಹೆಚ್. ಕೆ. ಕೃಷ್ಣಪ್ಪ ತನ್ನ ಅಟೋದಲ್ಲಿ ಪ್ರಯಾಣಿಕರನ್ನು ಕುಳ್ಳರಿಸಿಕೊಂಡು ಆರ್ಜಿ ಗ್ರಾಮಕ್ಕೆ ಬಾಡಿಗೆಗೆ ತೆರಳುತ್ತಿದ್ದಾಗ ಕಾರು ಹಾಗೂ ಆಟೋ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಆಟೋ ಪಲ್ಟಿಯಾಗಿದೆ. ರಭಸಕ್ಕೆ ಕಾರು ಪಕ್ಕದ ಅಂಗಡಿಗೆ ಡಿಕ್ಕಿಪಡಿಸಿದೆ.
ಅದೃಷ್ಟವಷಾತ್ ಅಟೋದಲ್ಲಿದ ಪ್ರಯಾಣಿಕ ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಂಗಡಿ ಸಂಪೂರ್ಣ ಜಖಂಗೊAಡು ಅಂಗಡಿಯಲ್ಲಿದ್ದ ಮೀನುಪೇಟೆಯ ನಿವಾಸಿ ರಶೀದ್ ಎಂಬವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣವೇ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತವೆಸಗಿದ ಚಾಲಕ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಚಲಿಸಿದ್ದಾನೆ. ಸಾರ್ವಜನಿಕರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಆಟೋ ಚಾಲಕರಾದ ಕೃಷ್ಣಪ್ಪ ಮತ್ತು ಗೂಡು ಅಂಗಡಿಯ ಮಾಲೀಕ ರಶೀದ್ ಅವರು ನೀಡಿದ ದೂರಿನ ಮೇರೆಗೆ ಕಾರು ಚಾಲಕ ಪಿ.ಯು ಪೂಣಚ್ಚ ಮೇಲೆ ಅಜಾಗರೂಕತೆಯ ವಾಹನ ಚಾಲನೆ ಮತ್ತು ವಾಹನ ಮತ್ತು ಇತರ ವಸ್ತುಗಳಿಗೆ ಹಾನಿ ೨೭೯ ಐ.ಪಿ.ಸಿ ಮತ್ತು ೩೩೭ ಐ.ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. -ಕೆ.ಕೆ.ಎಸ್