ಚೆಯ್ಯಂಡಾಣೆ, ಜ. ೧೬: ಮಡಿಕೇರಿ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಠಾಣಾಧಿಕಾರಿಯಾಗಿ ನೇಮಕಗೊಂಡ ಕೆ.ವೈ. ಹಮೀದ್ ರವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಾಪೋಕ್ಲುವಿನ ಮರ್ಕಜ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಗ್ರಾಮ ಸಮಿತಿಯ ಅಧ್ಯಕ್ಷ ಪಿ.ಎಂ.ಅಝೀಜ್, ಉಪಾಧ್ಯಕ್ಷ ಬದ್ರುದ್ದಿನ್ ಪಿ.ಎಂ,ಪದಾಧಿಕಾರಿಗಳಾದ ಸಿ.ಎಚ್ ಅಹಮ್ಮದ್ ಅಬ್ದುಲ್ ಅಝೀಜ್ ಹಾಜಿ,ಪಿ.ಎಂ. ಅರಪಾತ್,ಇಬ್ರಾಹಿಂ ಮುಸ್ಲಿಯಾರ್, ಹನೀಫ್ ಟಿ.ಎ. ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್, ಮಾಜಿ ಸದಸ್ಯ ರಶೀದ್ ಪಿ.ಎಂ, ಅಬ್ದುಲ್ಲ ಹಾಜಿ, ರಹೀಮ್ ಮಾಸ್ಟರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಹಿದ್ ಇಮಾಮಿ ಸ್ವಾಗತಿಸಿ, ಸಿ.ಎಂ. ಜಬ್ಬಾರ್ ವಂದಿಸಿದರು.