ಮಡಿಕೇರಿ, ಜ. ೧೬: ಗಣಪತಿ ಬೀದಿ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ಅಡ್ಡಿಯಾಗಿದ್ದ ಮನೆಯೊಂದರ ಹೆಚ್ಚುವರಿ ಭಾಗವನ್ನು ಸಂಬAಧಿಸಿದ ಮಾಲೀಕರೇ ತೆರವುಗೊಳಿಸಿದ್ದಾರೆ. ನಗರಸಭಾ ಮಾಜಿ ಸದಸ್ಯ ಬಿ.ಎಂ. ರಾಜೇಶ್ ಎಂಬವರ ಮನೆಯ ಹೆಚ್ಚುವರಿ ಭಾಗ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಬಗ್ಗೆ ನಗರಸಭೆಯ ಎಸ್‌ಡಿಪಿಐ ಸದಸ್ಯರುಗಳು ನಗರಸಭಾ ಅಧ್ಯಕ್ಷರು, ಆಯುಕ್ತರು, ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ನಗರಸಭೆಯಿಂದ ಹೆಚ್ಚುವರಿ ಭಾಗದ ತೆರವಿಗೆ ಸುರತ್ಕಲ್‌ನ ಎನ್‌ಐಟಿಗೂ ಪತ್ರ ಬರೆಯಲಾಗಿತ್ತು. ಈ ಬೆಳವಣಿಗೆ ನಡುವೆ ರಾಜೇಶ್ ಅವರೇ ಮನೆಯ ಹೆಚ್ಚುವರಿ ಭಾಗವನ್ನು ಸ್ವಯಂ ತೆರವುಗೊಳಿಸಿದ್ದಾರೆ. ಆ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಎಸ್‌ಡಿಪಿಐ ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಎಸ್‌ಡಿಪಿಐ ಮಾಜಿ ಅಧ್ಯಕ್ಷ, ನಗರಸಭಾ ಸದಸ್ಯ ಅಮಿನ್ ಮೊಯ್ಸಿನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.