ವೀರಾಜಪೇಟೆ, ಜ. ೧೪: ಕಾಫಿ ಬೆಳೆಗೆ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದು ಕಾಫಿ ವ್ಯಾಪಾರಿಗಳು ನೂರಾರು ಕಥೆಗಳನ್ನು ಹೇಳಿ ಬೆಳೆಗಾರ ಹಾಗೂ ರೈತರ ದಿಕ್ಕು ಬದಲಾಯಿಸುತ್ತಿದ್ದಾರೆ. ಪ್ರಕೃತಿ ವಿಕೋಪ, ಕೊರೊನಾ, ಹವಮಾನ ವೈಪರಿತ್ಯದಿಂದ ಕಾಫಿ ಬೆಳೆ ಇಲ್ಲದೆ ರೈತ ಕಂಗಾಲಾಗಿದ್ದು ಫಸಲು ಕೈಗೆ ಬರುವಾಗ ವ್ಯಾಪಾರಿಗಳು ದರ ಕುಸಿತದ ನಾಟಕವಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ವ್ಯಾಪಾರಿಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಕರ್ನಂಡ ರಘುಸೋಮಯ್ಯ ಹೇಳಿದ್ದಾರೆ.
ಕಾಫಿ ಬೆಳೆಗೆ ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ೪,೩೦೦ ರಿಂದ ೪,೫೦೦ರ ವರೆಗೆ ಬೆಲೆ ಇದೆ. ಸ್ವಾರ್ಥಪರ ಕೆಲವು ವ್ಯಾಪಾರಿಗಳು ವಿನಾಕಾರಣ ಬೆಲೆ ಕಡಿತ ಮಾಡಿ ಅದಕ್ಕೆ ಔಟ್‌ಟರ್ನ್, ತೇವಾಂಶಗಳ ಕಥೆ ಹೇಳಿಕೊಂಡು ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಕಳೆದ ಬಾರಿಯ ಅಕಾಲಿಕ ಮಳೆಯಿಂದ ಕಾಫಿ ನಿಗದಿತ ಸಮಯಕ್ಕಿಂತ ಮುಂಚೆ ಹಣ್ಣಾದ ಕಾರಣ ರೈತರು ಕಾಫಿಕುಯಿಲು ಪ್ರಾರಂಭಿಸಿದ್ದಾರೆ. ಡಿಸೆಂಬರ್ ಕೊನೆ ವಾರ ಹಾಗೂ ಜನವರಿ ಮೊದಲ ವಾರದಲ್ಲಿ ಮಾರಾಟ ಮಾಡಿದ ರೈತರಿಗೆ ೪,೪೦೦ ರೂ,ಗಳ ಉತ್ತಮ ಧಾರಣೆ ಲಭಿಸಿದೆ. ಆ ಸಂದರ್ಭದಲ್ಲಿ ಬೆಳೆಗಾರರನ್ನು ಹುರಿದುಂಬಿಸಲು ಬೆಲೆ ಏರಿಕೆ ಮಾಡಿ ಬೆಳೆಗಾರ ಕಾಫಿ ಕುಯಿಲು ಪ್ರಾರಂಭಿಸಿ ಮಾರಾಟ ಮಾಡುವ ಸಂದರ್ಭ ವ್ಯಾಪಾರಿಗಳು ನೂರಾರು ಕಾರಣಗಳನ್ನು ಹೇಳಿ ಕಡಿಮೆ ದರದಲ್ಲಿ ಕೊಂಡು ಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡಲೇ ಮದ್ಯ ಪ್ರವೇಶಿಸಿ ಒಂದು ನಿಗದಿತ ಬೆಲೆ ನಿಗದಿಪಡಿಸಿ ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳ ವಂಚನೆಯಿAದ ರೈತರನ್ನು ಮುಕ್ತಗೊಳಿಸುವಂತೆ ಅವರು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.