ಮಡಿಕೇರಿ, ಜ. ೧೪: ಪ್ರಸಕ್ತ ವರ್ಷ ಇಂಗ್ಲೆAಡ್‌ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಅಂಗವಾಗಿ ಬರ್ಮಿಂಗ್ ಹ್ಯಾಮ್ ೨೦೨೨-ಕ್ವೀನ್ಸ್ ಬ್ಯಾಟನ್ ಕ್ರೀಡಾಜ್ಯೋತಿ ಭಾರತಕ್ಕೂ ಆಗಮಿಸಿದೆ. ಕ್ರೀಡಾಕೂಟ ಆರಂಭಕ್ಕೆ ಮುನ್ನ ಈ ಕ್ರೀಡಾಜ್ಯೋತಿ ಪ್ರಪಂಚದ ಹಲವು ರಾಷ್ಟçಗಳಲ್ಲಿ ಆಗಮಿಸಲಿದ್ದು, ಭಾರತ ಒಲಂಪಿಕ್ ಅಸೋಸಿಯೇಷನ್ ಬರಮಾಡಿ ಕೊಂಡಿದೆ. ಭಾರತದಲ್ಲಿ ಕರ್ನಾಟಕದ ಬೆಂಗಳೂರು ಹಾಗೂ ಭುವನೇಶ್ವರದ ಒಡಿಶಾದಲ್ಲಿ ಕ್ರೀಡಾ ಜ್ಯೋತಿಗೆ ಸ್ವಾಗತÀ ಕೋರಲಾಗುತ್ತಿದೆ.

ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಒಲಂಪಿಕ್ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಜ್ಯೋತಿ ಸ್ವೀಕರಿಸಿದರು. ಬಳಿಕ ರಾಜ್ಯಪಾಲರಿಂದ ಕೊಡಗಿನವರಾದ ಒಲಂಪಿಯನ್ ಡಾ|| ಎ.ಬಿ. ಸುಬ್ಬಯ್ಯ ಅಂರ‍್ರಾಷ್ಟಿçÃಯ ಕ್ರೀಡಾಪಟು ಅಂಜುಬಾಬಿ ಜಾರ್ಜ್ ಕ್ರೀಡಾಜ್ಯೋತಿ ಪಡೆದರು. ವಿಧಾನ ಸೌಧದಿಂದ ಕಂಠೀರವ ಕ್ರೀಡಾಂಗಣ ದವರೆಗೆ ಒಲಂಪಿಯನ್‌ಗಳು ಅಂರ‍್ರಾಷ್ಟಿçÃಯ ಕ್ರೀಡಾಪಟುಗಳು ಕ್ರೀಡಾಜ್ಯೋತಿಯೊಂದಿಗೆ ಹೆಜ್ಜೆ ಹಾಕಿದರು. ಈ ಕಾರ್ಯಕ್ಕೆ ಸಿ.ಎಂ. ಬಸವರಾಜ್ ಬೊಮ್ಮಾಯಿ ಆನ್‌ಲೈನ್ ಮೂಲಕ ಚಾಲನೆ ನೀಡಿದರು. ಕ್ರೀಡಾಜ್ಯೋತಿಯೊಂದಿಗೆ ಜಿಲ್ಲೆಯ ವರಾದ ಡಾ|| ಎ.ಬಿ. ಸುಬ್ಬಯ್ಯ, ಅಂಜುಬಾಬಿ ಜಾರ್ಜ್, ಬೊಳ್ಳಂಡ ಪ್ರಮೀಳಾ ಅಯ್ಯಪ್ಪ, ಎಸ್.ವಿ. ಸುನಿಲ್, ವಿ.ಆರ್. ರಘುನಾಥ್, ಎಸ್.ಕೆ. ಉತ್ತಪ್ಪ, ಸಿ.ಸಿ. ಮಾಚಯ್ಯ, ಕೂತಂಡ ಪೂಣಚ್ಚ, ವಿಕ್ರಂಕಾAತ್, ಪರದಂಡ ಅಯ್ಯಪ್ಪ, ಮೇಕೇರಿರ ನಿತಿನ್ ತಿಮ್ಮಯ್ಯ ಮತ್ತಿತರರು ಭಾಗಿಗಳಾಗಿದ್ದರು.