ಮಡಿಕೇರಿ, ಜ. ೧೩: ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ.) ಹೆಸರಿನಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ವಿಧಾನಸಭಾ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಹಣದ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆಯ ಮೂಲದ ರೌಡಿಶೀಟರ್ ಆನಂದ್ (೩೧) ಬಂಧಿತ ಆರೋಪಿಯಾಗಿದ್ದು, ಈತನನ್ನು ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಾ. ೫ ರಂದು ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಆನಂದ್ ಕರೆ ಮಾಡಿ ತಾನು ಎ.ಸಿ.ಬಿ. ಕಡೆಯವನಾಗಿದ್ದು, ನೀವು ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ಸಂಪಾದನೆ ಮಾಡಿರುವುದಾಗಿ ನಿಮ್ಮವರೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಎ.ಸಿ.ಬಿ. ಅಧಿಕಾರಿಗಳು ನಿಮ್ಮ ಮನೆಗೆ ಕೆಲ ಸಮಯದಲ್ಲಿ ದಾಳಿ ನಡೆಸಲಿದ್ದಾರೆ. ಇದನ್ನು ನಾನು ತಡೆಯುತ್ತೇನೆ. ನಾನು ಕಳುಹಿಸುವ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆ ಮಾಡುವಂತೆ ಬೋಪಯ್ಯ ಅವರಿಗೆ ಬೇಡಿಕೆ ಇಟ್ಟಿದ್ದ.
ನಂತರ ಈ ಬಗ್ಗೆ ಶಾಸಕರು ನಗರ ಠಾಣೆಗೆ ದೂರು ಸಲ್ಲಿಸಿ ಐಜಿಪಿ ಗಮನಕ್ಕೂ ತಂದಿದ್ದರು. ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು, ಕರೆ ಬಂದ ಸಂಖ್ಯೆಯನ್ನು ಟ್ರಾö್ಯಕ್ ಮಾಡಲಾರಂಭಿಸಿದ್ದಾರೆ. ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿದ್ದ ಆನಂದ್, ಇದೇ ನಂಬರ್ ಮೂಲಕ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಕರೆ ಮಾಡಿದ್ದ ಎಂದು ತಿಳಿದು ಬಂದಿದೆ. ಎರಡು ಫೋನ್ ಹಾಗೂ ಸಿಮ್‌ಗಳನ್ನು ಬಳಸಿ ಎರಡು ಬಾರಿ ಆತ ಕರೆ ಮಾಡಿದ್ದಾನೆ. ತಾಂತ್ರಿಕ ವಿಭಾಗದ ಸಿಬ್ಬಂದಿಗಳ ಮೂಲಕ ಕಾರ್ಯಾಚರಣೆ ಆರಂಭಗೊAಡ ಬಳಿಕ ಆರೋಪಿ ಆಂದ್ರ-ಕರ್ನಾಟಕ ಗಡಿ ಭಾಗದಲ್ಲಿ ಇರುವುದಾಗಿ ತಿಳಿದು ಬಂದಿತ್ತು. ಆರೋಪಿ ಆಂದ್ರದಿAದ ವಾಪಸಾಗಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಬಂದ ಸಂದರ್ಭ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
(ಮೊದಲ ಪುಟದಿಂದ) ಆರೋಪಿ ಇದೀಗ ಮಡಿಕೇರಿ ಪೊಲೀಸರ ವಶದಲ್ಲಿದ್ದು, ತನಿಖೆ ಸಂದರ್ಭದಲ್ಲಿ ಅನೇಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ತುಮಕೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಆನೇಕ ಪ್ರಕರಣಗಳ ಆರೋಪಿಯಾಗಿರುವ ಆನಂದ್, ಈ ಹಿಂದೆ ಬೆಂಗಳೂರಿನ ಜೈಲಿನಲ್ಲಿದ್ದ ಸಂದರ್ಭ ಇತರ ಖೈದಿಗಳೊಂದಿಗೆ ಹಣ ಮಾಡುವ ಬಗ್ಗೆ ಮಾತನಾಡುತ್ತಿದ್ದ. ಆ ಸಂದರ್ಭ ಖೈದಿಯೊಬ್ಬ ಶ್ರೀಮಂತ ಹಾಗೂ ಜನಪ್ರಿಯ ವ್ಯಕ್ತಿಗಳಿಗೆ ಕರೆ ಮಾಡಿ ಹೆದರಿಸಿ ಹಣಕ್ಕೆ ಬೇಡಿಕೆ ಇಡುವಂತೆ ಹೇಳಿದ್ದ, ನಂತರ ಇಂಟರ್‌ನೆಟ್‌ನಲ್ಲಿ ರಾಜಕಾರಣಿಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಇಂಟರ್‌ನೆಟ್ ಮೂಲಕ ದೊರೆತ ಕೆ.ಜಿ. ಬೋಪಯ್ಯ ಅವರ ಸಂಪರ್ಕ ಸಂಖ್ಯೆಗೆ ಮೊದಲ ಕರೆ ಮಾಡಿದ ಆನಂದ್, ರೂ. ೧ ಕೋಟಿಗೆ ಬೇಡಿಕೆ ಇಟ್ಟಿದ್ದಾನೆ. ಏನಾದರೂ ಹಣ ಸಿಕ್ಕಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕಾರಣಿಗಳಿಗೆ ಕರೆ ಮಾಡುವ ಪ್ಲಾö್ಯನ್ ಇವನದಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿಯಿಂದ ಎರಡು ಮೊಬೈಲ್, ೨ ಸಿಮ್ ಕಾರ್ಡ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಹಾಗೂ ವೃತ್ತ ನಿರೀಕ್ಷಕ ವೆಂಕಟೇಶ್ ಮಾರ್ಗದರ್ಶನದಲ್ಲಿ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಸಂತ ಕುಮಾರ್, ನಂದ ಕುಮಾರ್ ಹಾಗೂ ನಾಗರಾಜ್ ಇದ್ದರು. ತನಿಖಾ ತಂಡ ಸುಮಾರು ೨,೫೦೦ ಕಿ.ಮೀ. ದೂರ ಕ್ರಮಿಸಿ ಆರೋಪಿಯ ಕುರಿತು ಸುಳಿವು ಪಡೆಯಿತು.