ನಾಪೋಕ್ಲು, ಜ. ೧೩: ೧೯೯೭ ರಲ್ಲಿ ಸ್ಥಾಪನೆಗೊಂಡ ನಾಪೋಕ್ಲು ಕೊಡವ ಸಮಾಜಕ್ಕೆ ಬೆಳ್ಳಿ ಹಬ್ಬದ ಸಂಭ್ರಮ. ೨೫ನೇ ವರ್ಷ ತುಂಬಿದ ಕೊಡವ ಸಮಾಜದ ಬೆಳ್ಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ನಿರ್ಧರಿಸಿರುವುದಾಗಿ ಇಂದು ಕೊಡವ ಸಮಾಜದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೇಟ್ಟೊಳಂಡ ಮನು ಮುತ್ತಪ್ಪ ತಿಳಿಸಿದರು.

೨೫ ನೇ ವರ್ಷದ ಸವಿ ನೆನಪಿಗಾಗಿ ದೇಶದ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ೭.೫ ಅಡಿ ಎತ್ತರದ ಪ್ರತಿಮೆಯನ್ನು ಶ್ರೀ ರಾಮ ಮಂದಿರದ ಎದುರಿನ ಜಾಗದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದ್ದು ಪಕ್ಕದಲ್ಲಿಯೇ ಹುತಾತ್ಮ ಯೋಧರ ಸ್ಮಾರಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಇದಕ್ಕಾಗಿ ಬಿದ್ದಾಟಂಡ ಕುಟುಂಬದವರು ಮತ್ತು ಶ್ರೀರಾಮ ಮಂದಿರದವರು ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು. ಅದರಂತೆ ಕೊಡವ ಸಮಾಜದ ಮುಂಭಾಗದಲ್ಲಿ ನಾಲ್ಕುನಾಡಿನ ಪಡೆ ಭೀರರಾದ ಕುಲ್ಲೇಟಿರ ಪೊನ್ನಣ್ಣ, ಅಪ್ಪಚ್ಚೀರ ಮಂದಣ್ಣ, ಕನ್ನಂಡ ದೊಡ್ಡಯ್ಯ, ಇವರುಗಳ ಪುತ್ಥಳಿಯನ್ನು ಅನಾವರಣ ಗೊಳಿಸಲು

(ಮೊದಲ ಪುಟದಿಂದ) ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದ ಅವರು, ಇದಕ್ಕಾಗಿ ಸುಮಾರು ರೂ. ೧.೫ ಕೋಟಿ ಬೇಕಿದ್ದು ಇದನ್ನು ದಾನಿಗಳಿಂದ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದರು. ಬೆಳ್ಳಿ ಹಬ್ಬದ ಪ್ರಯುಕ್ತ ಸ್ಮರಣ ಸಂಚಿಕೆಯನ್ನು ಹೊರ ತರಲಿದ್ದು ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅವರ ಸಂಪಾದಕತ್ವದಲ್ಲಿ ಮತ್ತು ಚೌರೀರ ಉದಯ ಅವರ ಸಹ ಸಂಪಾದಕತ್ವದಲ್ಲಿ ಹೊರ ತರಲು ನಿರ್ಧರಿಸಲಾಗಿದ್ದು ಇದರಲ್ಲಿ ನಾಲ್ಕು ನಾಡಿನ ವಿಚಾರಗಳನ್ನು ಪದ್ಧತಿ ಪರಂಪರೆಗಳನ್ನು ಅಳವಡಿಸಲು ತಿಳಿಸಲಾಗಿದೆ ಎಂದರು.

ನಾಲ್ಕು ನಾಡಿನಲ್ಲಿ ಸುಮಾರು ೧೭೫೫ ಸೈನಿಕರು ದೇಶ ಸೇವೆಯನ್ನು ಮಾಡಿದವರಾಗಿದ್ದು, ವಿಶಿಷ್ಟ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ. ಪಾಕಿಸ್ತಾನ, ಬಾಂಗ್ಲ, ಶ್ರೀಲಂಕಾ ಯುದ್ಧಗಳಲ್ಲಿ ಭಾಗವಹಿಸಿ ದೇಶಕ್ಕೋಸ್ಕರ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದ ಅವರು ಕೊಡಂದೇರ ಕುಟುಂಬದವರು ಹಿಂದೆ ನೆಲಜಿಯಲ್ಲಿ ನೆಲೆಸಿದ್ದರು ಎಂದು ಕೋರ್ಗ್ ಗೆಜೀಟಿಯರ್ ೧೮೯೦ರ ರೆಕ್ಟರ್‌ನಲ್ಲಿ ಉಲ್ಲೇಖವಿದೆ. ನಂತರ ಅವರು ಕುಂದ ಗ್ರಾಮದಲ್ಲಿ ನೆಲೆಸಿದ್ದರೆಂದು ತಿಳಿಸಿದರು.

ಕೊಡಗು ರಾಜರ ಕಾಲದಲ್ಲಿ ನಾಲ್ಕುನಾಡಿಗೆ ಟಿಪ್ಪು ಸುಲ್ತಾನ್ ೩೩ ಬಾರಿ ಆಕ್ರಮಣ ಮಾಡಿದಾದ ಅಂದು ಕೊಡವರು ಮತ್ತು ಮೂಲ ನಿವಾಸಿಗಳು ಅಪಾರ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡ ಸಂದರ್ಭ ಅವನನ್ನು ಯುದ್ಧ ಮಾಡಿ ಹಿಮ್ಮೆಟ್ಟಿಸಿದ ಪಡೆ ಭೀರರಾದ ಇವರುಗಳ ಸಹಸವನ್ನು ಯುವ ಜನರಿಗೆ ತಿಳಿಸುವ ಉದ್ದೇಶದಿಂದ ಅವರ ಪುತ್ಥಳಿಯನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದ ಅವರು ಕಾರ್ಯಕ್ರಮಕ್ಕೆ ದೇಶದ ಸೇನೆಯ ಉನ್ನತಾಧಿಕಾರಿಗಳನ್ನು, ಕರೆಯಿಸಲಾಗುವುದು. ಆ ದಿನ ಸಮಾಜದ ವತಿಯಿಂದ ಸಾಂಸ್ಕçತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜೀತ್ ನಾಣಯ್ಯ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಮುಕ್ಕಾಟೀರ ವಿನಯ್, ಸಹ ಕಾರ್ಯದರ್ಶಿ ಮಾಚೇಟಿರ ಕುಶು ಕುಶಾಲಪ್ಪ, ನಿರ್ದೇಶಕರಾದ ಬೊಳ್ಳಚೆಟ್ಟಿರ ಸುರೇಶ್, ಕೊಂಡೀರ ನಾಣಯ್ಯ, ಅರೆಯಡ ರಘು ಕರುಂಬಯ್ಯ, ಚೇನಂಡ ಗಿರೀಶ್, ಕುಂಡ್ಯೋಳAಡ ವಿಶೂ ಪೂವಯ್ಯ, ಕಾಟುಮಣಿಯಂಡ ಉಮೇಶ್, ಚಿಯಕಪೂವಂಡ ಸಚಿನ್ ಪೂವಯ್ಯ, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ನಾಟೋಳಂಡ ಕಸ್ತೂರಿ ಉತ್ತಪ್ಪ, ಕುಲ್ಲೇಟಿರ ಹೇಮಾ , ಚೌರೀರ ಉದಯ, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಇದ್ದರು.