ಮಡಿಕೇರಿ, ಜ. ೧೩: ಬಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ಸಂಪರ್ಕಿಸುವ ಯೋಜನೆಯಾಗಿದ್ದು, ಅರಣ್ಯ ಪ್ರದೇಶ ಎಂಬ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಸಂಬAಧಿಸಿದAತೆ ಇದೀಗ ಹೊಸತೊಂದು ತಿರುವು ಬಂದಿದೆ. ಈ ಜಾಗವು ಮೀಸಲು ಅರಣ್ಯಕ್ಕೆ ಸೇರಿದೆಯೋ ಅಥವಾ ಪೈಸಾರಿ ಜಾಗವೊ ಎಂಬ ಗೊಂದಲ ವೇರ್ಪಟ್ಟಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮಸ್ಥರ ಮನವಿಯಂತೆ ಖಚಿತಪಡಿಸಿಕೊಳ್ಳಲು ತಾ. ೧೮ ರಂದು ಜಂಟಿ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಭೂ ದಾಖಲೆಗಳ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಮೂಲಕ ಈ ಕುರಿತು ಜಂಟಿ ಸರ್ವೆ ನಡೆಸಲು ಇದೀಗ ದಿನಾಂಕ ನಿಗದಿಪಡಿಸಲಾಗಿದೆ. ಕೂಟಿಯಾಲ ಸೇತುವೆಯ ಒತ್ತಾಗಿರುವ ಜಾಗವು ಪೈಸಾರಿ ಜಾಗ ಅಥವಾ ಅರಣ್ಯ ಇಲಾಖೆಗೆ ಸೇರಿರುವ ಜಾಗ ಎಂಬದರ ಬಗ್ಗೆ ಗೊಂದಲವಿದೆ, ಗ್ರಾಮ ನಕ್ಷೆಯಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂಬದಾಗಿ ಅಲ್ಲಿನ ಕೆ.ಎಸ್. ಮಧು ಮೋಟಯ್ಯ ಹಾಗೂ ಇತರ ಕೆಲವು ಗ್ರಾಮಸ್ಥರು ಹೇಳಿದ್ದು, ಈ ಬಗ್ಗೆ ಸಂಬAಧಿಸಿದವರಿಗೆ ಮನವಿ ಸಲ್ಲಿಸಿದ್ದಾರೆ. ಗೊಂದಲ ನಿವಾರಣೆಗಾಗಿ ಜಂಟಿ ಸರ್ವೆಗೆ ಒತ್ತಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಜಂಟಿ ಸರ್ವೆಗೆ ತೀರ್ಮಾನಿಸಲಾಗಿದೆ.

ಗ್ರಾಮಸ್ಥರ ಮನವಿಯಂತೆ ಬಾಡಗರಕೇರಿ ಹಾಗೂ ಕೂಟಿಯಾಲ ಸೇತುವೆ ಸಂಪರ್ಕಿಸುವ ರಸ್ತೆಯ ಜಾಗವನ್ನು

(ಮೊದಲ ಪುಟದಿಂದ) ಸರ್ವೆ ಮಾಡುವ ಸಂಬAಧ ತಾ. ೧೮ ರಂದು ವೀರಾಜಪೇಟೆಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಿಂದ ಸರ್ವೆ ಕಾರ್ಯಕ್ಕೆ ಸರಕಾರಿ ಭೂಮಾಪಕ ಸಣ್ಣ ಜವರಯ್ಯ ಅವರನ್ನು ನಿಯೋಜಿಸಲಾಗಿದೆ. ಈ ದಿನದಂದು ಪೊನ್ನಂಪೇಟೆ ತಾಲೂಕು ಕಚೇರಿಯಿಂದ ಸಂಬAಧಪಟ್ಟ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಯವರನ್ನು ನಿಯೋಜಿಸಿಕೊಡುವಂತೆ ಹಾಗೂ ಅರಣ್ಯ ಇಲಾಖೆಯಿಂದಲೂ ಸಂಬAಧಪಟ್ಟ ಸಿಬ್ಬಂದಿಗಳನ್ನು ನಿಯೋಜಿಸಿಕೊಡುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಿಂದ ಪೊನ್ನಂಪೇಟೆ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ. ಅಲ್ಲದೆ ವನ್ಯಜೀವಿ ವಿಭಾಗದ ಸಂಬAಧಿಸಿದ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

೧೯೯೭ರಲ್ಲಿ ಅಂದಾಜು ರೂ. ೮೦ ಲಕ್ಷ ವೆಚ್ಚದಲ್ಲಿ ಕೂಟಿಯಾಲ ಸೇತುವೆ ನಿರ್ಮಾಣಗೊಂಡಿದೆ. ಆದರೆ ಈ ಸಂಪರ್ಕ ರಸ್ತೆಯ ಹಲವು ಮೀಟರ್‌ನಷ್ಟು (ಮೊದಲ ಪುಟದಿಂದ) ಸರ್ವೆ ಮಾಡುವ ಸಂಬAಧ ತಾ. ೧೮ ರಂದು ವೀರಾಜಪೇಟೆಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಿಂದ ಸರ್ವೆ ಕಾರ್ಯಕ್ಕೆ ಸರಕಾರಿ ಭೂಮಾಪಕ ಸಣ್ಣ ಜವರಯ್ಯ ಅವರನ್ನು ನಿಯೋಜಿಸಲಾಗಿದೆ. ಈ ದಿನದಂದು ಪೊನ್ನಂಪೇಟೆ ತಾಲೂಕು ಕಚೇರಿಯಿಂದ ಸಂಬAಧಪಟ್ಟ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಯವರನ್ನು ನಿಯೋಜಿಸಿಕೊಡುವಂತೆ ಹಾಗೂ ಅರಣ್ಯ ಇಲಾಖೆಯಿಂದಲೂ ಸಂಬAಧಪಟ್ಟ ಸಿಬ್ಬಂದಿಗಳನ್ನು ನಿಯೋಜಿಸಿಕೊಡುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಿಂದ ಪೊನ್ನಂಪೇಟೆ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ. ಅಲ್ಲದೆ ವನ್ಯಜೀವಿ ವಿಭಾಗದ ಸಂಬAಧಿಸಿದ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

೧೯೯೭ರಲ್ಲಿ ಅಂದಾಜು ರೂ. ೮೦ ಲಕ್ಷ ವೆಚ್ಚದಲ್ಲಿ ಕೂಟಿಯಾಲ ಸೇತುವೆ ನಿರ್ಮಾಣಗೊಂಡಿದೆ. ಆದರೆ ಈ ಸಂಪರ್ಕ ರಸ್ತೆಯ ಹಲವು ಮೀಟರ್‌ನಷ್ಟು