ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ತಾ. ೯ ರಿಂದ ೧೯ರವರೆಗೆ ಹಮ್ಮಿಕೊಂಡಿದ್ದ ಮಹಾ ಪಾದಯಾತ್ರೆಯ ಪ್ರಹಸನ ಕೇವಲ ೫ ದಿನಗಳಿಗೆ ಮೊಟಕುಗೊಂಡು ಅಂತ್ಯಗೊAಡಿದೆ. ಗುರುವಾರ ಕಾಂಗ್ರೆಸ್ ನಾಯಕರು ರಾಮನಗರದಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿ ದ್ದಾರೆ. ಬೆಂಗಳೂರು ತಲಪಬೇಕಾಗಿದ್ದ ಪಾದಯಾತ್ರೆ ಸ್ಥಗಿತಗೊಂಡಿದೆ.

ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಪಾದಯಾತ್ರೆ ನಡೆ ಖಂಡಿತ ತಪ್ಪಲ್ಲ. ಪೂರ್ವ ನಿರ್ಧರಿತ ಪಾದಯಾತ್ರೆಯನ್ನು ಕೋವಿಡ್ ನಿಯಮ ಕಾಯ್ದೆ ಜಾರಿಗೊಂಡ ಬಳಿಕ ಮಾಡಿಯೇ ತೀರುತ್ತೇವೆ ಎನ್ನುವ ಛಲ ಮಾತ್ರ ತಪ್ಪು ಹೆಜ್ಜೆಯಾಗಿದೆ. ಮೇಕೆದಾಟು ಯೋಜನೆ ಜಾರಿಯಾಗಲೇ ಬೇಕು ಎನ್ನುವದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಕಾಂಗ್ರೆಸ್‌ನ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ ಡಿ. ಕೆ. ಶಿವಕುಮಾರ್ ಅವರ ನಿಲುವು ಪ್ರಶಂಸನೀಯ. ಸಿದ್ದರಾಮಯ್ಯ ಅವರ ಬೆಂಬಲ ಉತ್ತಮ ನಿರ್ಧಾರವೇ ಹೌದು. ಆದರೆ, ರಾಜ್ಯ ಬಿಜೆಪಿ ಆಡಳಿತದ ಸರ್ಕಾರ ಕೋವಿಡ್ ನಿಯಮಾವಳಿಗಳನ್ನು ಜಾರಿಗೊಳಿಸಿದ ಬಳಿಕ ಪಾದಯಾತ್ರೆಯನ್ನು ಮಾಡುವದಕ್ಕೋಸ್ಕರ ಸಾರ್ವಜನಿಕ ಹಿತದೃಷ್ಟಿಯನ್ನು ಲೆಕ್ಕಿಸದೆ ಹಠ ಸಾಧನೆ ಗೈದಿದ್ದು ಖೇದಕರ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು, ಕಾರ್ಯಕರ್ತರಿಗೂ ಕೋವಿಡ್ ಸೋಂಕು ತಗುಲಿ ಹೋದೆಡೆಯೆಲ್ಲ ಪಸರಿಸಲು ಕಾರಣವಾಯಿತು ಎಂಬುದAತೂ ನಿಸ್ಸಂಶಯ. ಇದಕ್ಕೆ ಬದಲಾಗಿ ಪೂರ್ವ ನಿರ್ಧರಿತ ದಿನ ಪಾದಯಾತ್ರೆ ಪ್ರಾರಂಭಿಸಲು ಉದ್ದೇಶಿಸಿದ್ದ ಕಾವೇರಿ ಸಂಗಮ ಕ್ಷೇತ್ರದಲ್ಲಿ ಸಾಂಕೇತಿಕವಾಗಿ ಧರಣಿ ಕುಳಿತು ಬಳಿಕ ಪಾದಯಾತ್ರೆಯನ್ನು ಮುಂದೂಡಿದ್ದರೆ ಕಾಂಗ್ರೆಸ್ ನಾಯಕರ ಪ್ರತಿಷ್ಠೆ ಇನ್ನೂ ಹೆಚ್ಚುತ್ತಿತ್ತು. ಈ ನಡುವೆ ಬಿಜೆಪಿ ಆಡಳಿತದ ಮುಖ್ಯಮಂತ್ರಿಯಾದಿಯಾಗಿ ಸಚಿವರುಗಳು ಕೇವಲ ಬಾಯಿಬಡುಕರಂತೆ ಹೇಳಿಕೆ ನೀಡುತ್ತಾ ಕುಳಿತಿದ್ದುದು ಹಾಸ್ಯಾಸ್ಪದವೆನಿಸಿತು. ಗೃಹಸಚಿವ ಅರಗಜ್ಞಾನೇಂದ್ರ ಅವರಂತೂ ಸರ್ಕಾರ ಜಾರಿಗೊಳಿಸಿದ ಕಾಯ್ದೆಯನ್ನು ಕಾಂಗ್ರೆಸ್ ಪಾದಯಾತ್ರೆಗೆ ನಿರ್ಬಂಧಗೊಳಿಸಲು ಅಸಮರ್ಪಕ ವ್ಯಕ್ತಿಯಂತೆ ಮಾತನಾಡುತ್ತಿದ್ದುದು ತೀರಾ ಆಭಾಸಕರವೆನಿಸಿತು. ಮಾಸ್ಕ್ ಹಾಕಿ ನಡೆಯದಿದ್ದರೆ ಸಾಮಾನ್ಯ ವ್ಯಕ್ತಿಯನ್ನು ತಡೆದು ದಂಡ ವಿಧಿಸುವ ಸರ್ಕಾರ ಸಹಸ್ರಾರು ಮಂದಿ ಕೋವಿಡ್ ನಿಯಮ ಪಾಲಿಸದೆ ಪಾದಯಾತ್ರೆ ತೆರಳಿದಾಗ ಅದನ್ನು ತಡೆಯಲು ಅಸಾಮರ್ಥ್ಯ ತೋರಿಸಿದ್ದುದು ವಿಪರ್ಯಾಸ ವೆನಿಸಿತು. ಹೀಗೆ ಮಾಡಿದರೆ ತಮ್ಮ ಪಕ್ಷಕ್ಕೆ ಎಲ್ಲಿ ಜನಾಕ್ರೋಶ ಉಂಟಾಗು ತ್ತದೋ ಎಂಬ ಭಯದಿಂದ ಆಡಳಿತ ನಡೆಸುವವರು ಈ ರೀತಿ ವರ್ತಿಸಿದರೆ ಸಾಮಾನ್ಯ ಜನರ ಪಾಡೇನು ? ಯಾವಾಗ ಸಾರ್ವಜನಿಕ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿ ಪಾದಯಾತ್ರೆ ವಿರುದ್ಧ ಮೊರೆ ಹೋದರೋ ಆ ಸಂದರ್ಭ ಸರ್ಕಾರಕ್ಕೆ ನ್ಯಾಯಾಲಯ ಕ್ರಮಕೈಗೊಳ್ಳದ ಬಗ್ಗೆ ಛಾಟಿ ಏಟು ಬೀಸಿತೋ ಆಗಷ್ಟೇ ಸರ್ಕಾರ ಎಚ್ಚೆತ್ತುಕೊಂಡಿದೆ.

ಅಂದರೆ ಸರ್ಕಾರ ತಾನೇ ಘೋಷಿಸಿದ ಕಾನೂನು ಕಾಯ್ದೆಗಳನ್ನು ನಿಷ್ಪಕ್ಷಪಾತವಾಗಿ ನ್ಯಾಯೋಚಿತವಾಗಿ ಜಾರಿಗೊಳಿಸಬೇಕಾದರೆ ನ್ಯಾಯಾಲಯದ ಮಧ್ಯಪ್ರವೇಶ ಕರ್ನಾಟಕದಲ್ಲಿ ಅನಿವಾರ್ಯವಾಗಿದೆ ಎಂಬದು ಇದೀಗ ಸಾಬೀತಾದಂತಾಗಿದೆ.

ಸಹಸ್ರಾರು ಜನ ಒಂದೆಡೆ ಕಲೆತಾಗ ಪ್ರಾಣಾಂತಿಕವಾದ ಕೋವಿಡ್ ಬಾಧಿಸುತ್ತದೆ ಎಂಬ ಪರಿಕಲ್ಪನೆ ಕಾಂಗ್ರೆಸ್- ಬಿ.ಜೆ.ಪಿ. ಎರಡು ಪಕ್ಷಗಳಲ್ಲಿಯೂ ಇಲ್ಲವಾಗಿದೆ ಎಂಬದAತೂ ರಾಜ್ಯದ ಸಾಮಾನ್ಯ ಪ್ರಜೆಯ ಅರಿವಿಗೆ ಬಂದAತಾಗಿದೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ಬಗ್ಗೆ ಖಡಾಖಂಡಿತ ನಿಲುವು ವ್ಯಕ್ತಪಡಿಸಿದ್ದಾರೆ. ಸಮತೋಲನ ಸಾಧಿಸಿದ್ದಾರೆ. ಪಾದಯಾತ್ರೆಯನ್ನು ಕೈಬಿಡುವಂತೆ ಕಾಂಗ್ರೆಸ್‌ಗೆ ಒತ್ತಾಯ ಹೇರಿದಲ್ಲದೆ ಸರ್ಕಾರವು ಪಾದಯಾತ್ರೆಯನ್ನು ತಡೆಯುವಂತೆ ಅವರು ಆಗ್ರಹಿಸಿದ್ದರು.

ಸರ್ಕಾರವು ಕೂಡ ಪಾದಯಾತ್ರೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರನ್ನು ಆಗ ನಿರ್ಲಕ್ಷö್ಯ ಮಾಡದೆ ಕೋವಿಡ್ ನಿಯಮ ಜಾರಿಯಾದ ಬಳಿಕ ಕರೆದು ಚರ್ಚಿಸಬಹುದಿತ್ತು. ಮೇಕೆದಾಟು ಯೊಜನೆಯನ್ನು ಜಾರಿಗೊಳಿಸು ತ್ತೇವೆ ಎನ್ನುವ ಭರವಸೆ ನೀಡಿ ಕಾಂಗ್ರೆಸ್‌ನ ನಿಲುವಿಗೆ ಪೂರಕವಾಗಿ ಸ್ಪಂದಿಸಿದ್ದಿದ್ದರೆ, ರಾಜಕೀಯ ಮಾಡದೆ ಪಾದಯಾತ್ರೆ ಕೈಬಿಡುವಂತೆ ಕೋರಿದ್ದರೆ ಇಷ್ಟೊಂದು ಗೊಂದಲಗಳಾಗುತ್ತಿರಲಿಲ್ಲ.