ಗೋಣಿಕೊಪ್ಪಲು.ಜ.೧೩: ದ.ಕೊಡಗಿನ ಜನರನ್ನು ಭಯ ಭೀತಗೊಳಿಸಿದ್ದ ಹುಲಿಯ ಉಪಟಳ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ನಾಗರಿಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕೊಂಚ ನೆಮ್ಮದಿ ಕಂಡಿದ್ದಾರೆ. ಹುಲಿಯ ಸಂಚಾರದ ಬಗ್ಗೆ ಯಾವುದೇ ಸುಳಿವು ಸದ್ಯದ ಪರಿಸ್ಥಿತಿಯಲ್ಲಿ ಲಭ್ಯವಾಗಿಲ್ಲ. ಹೀಗಾಗಿ ಹುಲಿಯು ಮತ್ತೆ ಅರಣ್ಯದತ್ತ ಹೆಜ್ಜೆ ಹಾಕಿರಬಹುದೆ ಎಂದು ಅಂದಾಜಿಸಲಾಗಿದೆ.

ನೂತನ ವರ್ಷಾರಂಭ ದಿನದಿಂದ ಸತತ ಎಂಟು ದಿನಗಳ ಕಾಲ ತೂಚಮಕೇರಿ, ಬೆಳ್ಳೂರು ಹಾಗೂ ಕೋಣಗೇರಿಯ ಭಾಗದ ರೈತರ ಐದು ಜಾನುವಾರಗಳ ಮೇಲೆ ದಾಳಿ ನಡೆಸಿದ್ದ ಹುಲಿಯೂ ಯಾರ ಕಣ್ಣಿಗೂ ಸಿಗದಂತೆ ಮಾಯಾವಾಗುತ್ತಿತ್ತು. ನಂತರ ಮಾರನೇ ದಿನ ಮಧ್ಯರಾತ್ರಿ ವೇಳೆ ರೈತರ ಕೊಟ್ಟಿಗೆ ಬಳಿ ತೆರಳಿ ಕೊಟ್ಟಿಗೆಯಲ್ಲಿರುವ ಹಸುಗಳ ಮೇಲೆ ದಾಳಿ ನಡೆಸುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯುವಂತೆ ಇಲಾಖೆಯ ಮೇಲೆ ಒತ್ತಡ ತಂದಿದ್ದರು.

ಹುಲಿಯಿAದ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಕಾರ್ಯಪ್ರವೃತ್ತರಾದ ತಿತಿಮತಿ ಅರಣ್ಯ ಇಲಾಖೆಯ ಎಸಿಎಫ್ ಉತ್ತಪ್ಪ ಹುಲಿಯ ಸೆರೆಗೆ ಅವಕಾಶ ನೀಡುವಂತೆ ಬೆಂಗಳೂರಿನ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಕೇಳಲಾಗಿತ್ತು.

ಉಪಟಳ ನೀಡುತ್ತಿರುವ ಹುಲಿಯನ್ನು ಸೆರೆಹಿಡಿಯಲು ಹಿರಿಯ ಅಧಿಕಾರಿಗಳು ಆದೇಶ ನೀಡುತ್ತಿದ್ದಂತೆಯೇ ಇತ್ತ ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ ಅಧಿಕಾರಿಗಳ ತುರ್ತು ಸಭೆ ಕರೆದು ಹುಲಿಯ ಸೆರೆಗೆ ಬೇಕಾದ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.

(ಮೊದಲ ಪುಟದಿಂದ) ಎರಡು ಸಾಕಾನೆಗಳ ಸಹಾಯ ಪಡೆದ ಇಲಾಖೆಯ ಅರವಳಿಕೆ ತಜ್ಞರಾದ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಡಾ.ರಮೇಶ್ ಹಾಗೂ ಇತರೆ ಸಿಬ್ಬಂದಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ದಿನಪೂರ್ತಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.

ಸAಜೆಯಾದರೂ ಹುಲಿಯ ಸಂಚಾರದ ಬಗ್ಗೆ ಯಾವುದೇ ಹೆಜ್ಜೆ ಗುರುತುಗಳಾಗಲಿ,ಇತರ ಕುರುವುಗಳಾಗಲಿ ಕಾರ್ಯಾಚರಣೆಯ ತಂಡಕ್ಕೆ ಲಭ್ಯವಾಗಲಿಲ್ಲ. ಕೂಂಬಿAಗ್ ಕಾರ್ಯಾಚರಣೆಗೆ ತಿತಿಮತಿ ಮತ್ತಿಗೋಡು ಸಾಕಾನೆಗಳ ಶಿಬಿರದಿಂದ ಮಹೇಂದ್ರ ಹಾಗೂ ಭೀಮ ಎರಡು ಸಾಕಾನೆಗಳ ಸಹಾಯ ಪಡೆಯಲಾಗಿದೆ.

ತಿತಿಮತಿ ವಲಯದ ಎಸಿಎಫ್ ಉತ್ತಪ್ಪ, ನಾಗರಹೊಳೆ ರಾಷ್ಟಿçÃಯ ಉದ್ಯಾನದ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್‌ಎಫ್‌ಒ ರಾಜಪ್ಪ, ದಿವಾಕರ್ ಹಾಗೂ ಇತರ ಅಧಿಕಾರಿಗಳು ಆನೆ ಮಾವುತರು, ಕಾವಾಡಿಗಳು ಸೇರಿದಂತೆ ೫೦ ಸಿಬ್ಬಂದಿಗಳು ಸ್ಥಳದಲ್ಲಿ ಮೊಖಂ ಹೂಡಿದ್ದು ಶಾಲೆಯ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಾರೆ.

ಮೂರನೇ ದಿನವಾದ ಗುರುವಾರ ಮುಂಜಾನೆಯಿAದಲೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಾನೆಗಳ ಸಹಾಯದಿಂದ ಹುಲಿಯ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಡಿಎಫ್‌ಒ ಚಕ್ರಪಾಣಿ ಮಾಹಿತಿ ಒದಗಿಸಿದರು. ಪ್ರಸ್ತುತ ಕೂಬಿಂಗ್ ತಂಡವನ್ನು ಉಪವಲಯದ ಅರಣ್ಯಾಧಿಕಾರಿ ದಿವಾಕರ್, ಗಣೇಶ್‌ಶೇಟ್, ಸಿ.ಡಿ.ಬೋಪಣ್ಣ, ಮುನ್ನೆಡೆಸುತ್ತಿದ್ದಾರೆ. ತಂಡ ರಚನೆ, ತಾಂತ್ರಿಕ ಕಾರ್ಯವನ್ನು ಸಹಾಯಕ ಅರಣ್ಯಾಧಿಕಾರಿಗಳಾದ ರಕ್ಷಿತ್, ಸಚಿನ್ ಚೌಗಾಲ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಕಾಡು ಸೇರಿತಾ ವ್ಯಾಘ್ರ?

ಒಂದು ವಾರದ ಅಂತರದಲ್ಲಿ ಐದು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಹುಲಿಯೂ ನಾಗರಹೊಳೆ ರಾಷ್ಟಿçÃಯ ಉದ್ಯಾನದಿಂದ ಆಗಮಿಸಿದ ಹುಲಿಯೆಂದು ಅಧಿಕಾರಿಗಳು ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವ ವೀಡಿಯೋದ ಮೂಲಕ ಸ್ಪಷ್ಪವಾಗಿತ್ತು.

ಇದೀಗ ತೂಚಮಕೇರಿ ಯಲ್ಲಿ ಘಟನೆ ನಡೆದು ನಾಲ್ಕು ರಾತ್ರಿ ಕಳೆದಿವೆ ಇಲ್ಲಿಯ ತನಕ ಈ ಹುಲಿಯು ಎಲ್ಲಿಯೂ ದಾಳಿ ನಡೆಸಿದ ವರದಿ ಆಗಿಲ್ಲ. ಹೀಗಾಗಿ ಹುಲಿಯು ಮತ್ತೆ ನಾಗರಹೊಳೆ ರಾಷ್ಟಿçÃಯ ಉದ್ಯಾನದತ್ತ ತೆರಳಿರಬಹುದೇ.? ಎಂದು ಅಂದಾಜಿಸಲಾಗಿದೆ. ನಾಲ್ಕು ರಾತ್ರಿ ಹಾಗೂ ಐದು ಹಗಲಿನಲ್ಲಿ ಯಾವುದೇ ಆಹಾರ ಇಲ್ಲದೇ ಹುಲಿಯು ಸಂಚಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಹಾರ ಹರಸಿಕೊಂಡು ಹುಲಿಯು ಅರಣ್ಯದತ್ತ ತೆರಳಿರಬಹುದಾದ ಸಾಧ್ಯತೆ ಇರಬಹುದು ಎಂದು ಅರಣ್ಯ ಇಲಾಖೆಯ ಹಿರಿಯ ಅನುಭವಿ ಅಧಿಕಾರಿಗಳು ಮಾಹಿತಿ ಹಂಚಿಕೊAಡಿದ್ದಾರೆ.

- ಹೆಚ್.ಕೆ. ಜಗದೀಶ್