ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ: ಸಿಎಂಗಳೊAದಿಗೆ ಸಂವಾದದಲ್ಲಿ ಪ್ರಧಾನಿ ಸಲಹೆ

ನವದೆಹಲಿ, ಜ. ೧೩: ಕೋವಿಡ್-೧೯ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಳದ ನಡುವೆ ದೇಶದಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊAದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮುನ್ಸೂಖ್ ಮಾಂಡವೀಯಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಓಮಿಕ್ರಾನ್ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಂಕಿನಿAದ ಆತಂಕಪಡುವ ಅಗತ್ಯವಿಲ್ಲ. ಸೋಂಕು ಹರಡದಂತೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ಸೂಚಿಸಿದ್ದಾರೆ. ಲಸಿಕೆ ಬಗ್ಗೆ ವದಂತಿಗಳಿಗೆ ಕಿವಿಗೂಡಬಾರದು. ಸ್ಥಳೀಯವಾಗಿ ಕಂಟೈನ್‌ಮೆAಟ್ ನಿಯಮ ಪಾಲಿಸಿ, ಹೋಂಐಸೋಲೇಷನ್ ಚಿಕಿತ್ಸೆಗೆ ಆದ್ಯತೆ ನೀಡಿ, ಕೋವಿಡ್ ಸೋಂಕಿತರಿಗೆ ಟೆಲಿಮೆಡಿಸನ್ ಸಹಕಾರಿಯಾಗಿದೆ. ಎಲ್ಲಾ ರೀತಿಯ ಪ್ರಭೇದ ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಪರಿಸ್ಥಿತಿ ನಿರ್ವಹಣೆಗಾಗಿ ರಾಜ್ಯಗಳ ಜೊತೆಗೆ ಸಹಕರಿಸಲು ಕೇಂದ್ರ ಸಿದ್ಧವಿದೆ ಎಂದು ಪ್ರಧಾನಿ ರಾಜ್ಯಗಳಿಗೆ ಆಭಯ ನೀಡಿದ್ದಾರೆ.

ಮೇಕೆದಾಟು ಹೋರಾಟ ನಿಲ್ಲಿಸಲ್ಲ, ಇದು ತಾತ್ಕಾಲಿಕ ಸ್ಥಗಿತವಷ್ಟೆ: ಡಿ.ಕೆ. ಶಿವಕುಮಾರ್

ರಾಮನಗರ, ಜ. ೧೩: ಕಾವೇರಿ ನೀರಿಗಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ, ಕೋವಿಡ್ ಮೂರನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕ ಸ್ಥಗಿತ ನೀಡುತ್ತಿದ್ದೇವಷ್ಟೆ, ಮುಂದಿನ ದಿನಗಳಲ್ಲಿ ರಾಮನಗರದಿಂದಲೇ ಪಾದಯಾತ್ರೆ ಪುನರಾರಂಭಿಸುತ್ತೇವೆ ಹಾಗೂ ಪಾದಯಾತ್ರೆ ಅಂತ್ಯ ಮಾಡಲು ನಿರ್ಧರಿಸಿದ ಸ್ಥಳದಲ್ಲಿಯೇ ಕೊನೆಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜೊತೆ ಚರ್ಚೆ ನಡೆಸಿ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಜನರೇ ನಮಗೆ ಮುಖ್ಯ, ಅವರ ಹಿತದೃಷ್ಟಿಯಿಂದ ಪಾದಯಾತ್ರೆಗೆ ತಾತ್ಕಾಲಿಕ ವಿರಾಮ ಹಾಕುತ್ತಿದ್ದೇವೆ ಹೊರತು ರಾಜ್ಯ ಸರ್ಕಾರದ ಕೇಸಿಗೆ ಹೆದರಿ ಅಲ್ಲ, ಜನತೆಗೆ ತಪ್ಪು ಸಂದೇಶ ಹೋಗಬಾರದು ಎಂಬುದು ನಮ್ಮ ಉದ್ದೇಶ ಎಂದರು. ಕಾಂಗ್ರೆಸ್ ಹಳೆಯ ರಾಷ್ಟಿçÃಯ ಪಕ್ಷವಾಗಿದ್ದು ಯಾವತ್ತಿಗೂ ಜನತೆಗೆ ಪರವಾಗಿ ನಿಂತಿದೆ, ಇನ್ನು ಮುಂದೆಯೂ ನಿಲ್ಲುತ್ತದೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ನಮಗೂ ಜವಾಬ್ದಾರಿಯಿದೆ. ನಾಡು-ನುಡಿ, ಜಲ, ನೆಲದ ರಕ್ಷಣೆಯ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಹೋರಾಟದಲ್ಲಿ ಯಾವತ್ತಿಗೂ ಮುಂಚೂಣಿಯಲ್ಲಿರುತ್ತದೆ ಎಂದರು.

ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಪಾಸಿಟಿವ್

ಬೆಂಗಳೂರು, ಜ. ೧೩: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಮೊನ್ನೆ ಮೇಕೆದಾಟು ಸಂಗಮದಲ್ಲಿ ಆರಂಭವಾಗಿದ್ದ ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಉಳಿದ ನಾಯಕರ ಜೊತೆ ಕೂಡ ಹೆಜ್ಜೆ ಹಾಕಿದ್ದರು. ಕೊರೊನಾ ಸೋಂಕಿನ ಲಕ್ಷಣಗಳು ಹೆಚ್ಚಾಗಿಲ್ಲ, ಸೌಮ್ಯ ರೂಪದಲ್ಲಿದೆ. ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ. ಕೋವಿಡ್ ಲಸಿಕೆಯನ್ನು ಈಗಾಗಲೇ ಪಡೆದಿದ್ದಾರೆ ಎಂದು ಅವರ ಕಚೇರಿ ಮೂಲ ತಿಳಿಸಿದೆ. ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೂಡ ಟ್ವಿಟ್ಟರ್ ಮೂಲಕ ದೃಢಪಡಿಸಿದ್ದಾರೆ. ಖರ್ಗೆಯವರ ಕಚೇರಿಯ ಮೂವರು ಸಿಬ್ಬಂದಿಗೆ ಕೂಡ ಕೊರೊನಾ ಪಾಸಿಟಿವ್ ಬಂದಿದೆ.