ಮಡಿಕೇರಿ, ಜ. ೧೨: ಎಂ.ಎ. ಕೊಡವ ಸ್ನಾತಕೋತ್ತರ ಪದವಿಗೆ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ತಾ.೨೦ ರಂದು ಕೊನೆಯ ದಿನವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮನವಿ ಮಾಡಿದರು. ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಡುವ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಕೊಡವ ಸ್ನಾತಕೋತ್ತರ ತರಗತಿ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿಯೂ ಎಂ.ಎ. ಪದವಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ತಾವು ಸೇರಿದಂತೆ ನುರಿತ ತಜ್ಞರು ಗಳಾದ ಬಾಚರಣಿಯಂಡ ಪಿ.ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಡಾ. ತೀತಿರ ರೇಖಾ ವಸಂತ್, ಡಾ. ನಡಿಕೇರಿಯಂಡ ಪೂವಯ್ಯ, ಡಾ. ಜೆ. ಸೋಮಣ್ಣ ಇವರುಗಳ ಸಹಕಾರದಿಂದ ಪಠ್ಯಕ್ರಮವನ್ನು ೪ ಸೆಮಿಸ್ಟರ್‌ಗಳಿಗೆ ತಯಾರಿಸಲಾಗಿದೆ. ಈ ಸ್ನಾತಕೋತ್ತರ ತರಗತಿಗಳಿಗೆ ಯಾವುದೇ ಪದವಿ ಪಡೆದವರು ಸೇರ್ಪಡೆಗೊಳ್ಳಬಹುದು. ಅಲ್ಲದೆ ವಯಸ್ಸಿನ ನಿರ್ಬಂಧವಿಲ್ಲ ವೆಂದು ತಿಳಿಸಿದರು. ಈ ಸ್ನಾತಕೋತ್ತರ ಪದವಿ ಪಡೆದವರು ಮುಂದೆ ಉಪನ್ಯಾಸಕರಾಗಲು ಅರ್ಹರಾಗು ತ್ತಾರೆ. ಅಲ್ಲದೆ ಪದವಿ ಪಡೆದ ನಂತರ ಸಂಶೋಧನೆಯನ್ನು ಮಾಡಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆಯಬಹುದು. ಇತರ ಅನುವಾದ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳಿವೆ, ಅಲ್ಲದೆ ಕೊಡವ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು. ಎಂ.ಎ ಕೊಡವ ಸ್ನಾತಕೋತ್ತರ ತರಗತಿ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಲು ತಾ. ೨೨ ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ ನೋಡಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಚಿಕ್ಕಅಳುವಾರ ಜ್ಞಾನ ಕಾವೇರಿಯ ಪ್ರಬಾರ ನಿರ್ದೇಶಕ ಡಾ. ಚಂದ್ರಶೇಖರ್, ಕೊಡವ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಧರ್ಮಪ್ಪ, ಫೀ.ಮಾ.ಕಾರ್ಯಪ್ಪ ಕಾಲೇಜಿನÀ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರವಿಶಂಕರ್, ಯೋಗ ವಿಜ್ಞಾನದ ಮುಖ್ಯಸ್ಥ ಡಾ. ಶ್ಯಾಂ ಸುಂದರ ಹಾಗೂ ಮಂಗಳೂರು ವಿವಿ ಸಲಹಾ ಸಮಿತಿ ಸದಸ್ಯ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅವಿರತ ಪ್ರಯತ್ನದ ಫಲವಾಗಿ ಸ್ನಾತಕೋತ್ತರ ಕೋರ್ಸ್ ಆರಂಭ ಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿ ದರಲ್ಲದೆ ಪದವಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಹಲವು ಶಾಲೆಗಳಲ್ಲಿಯೂ ಕೊಡವ ಭಾಷೆಯನ್ನು ಐಚ್ಛಿಕ ವಿಷಯವಾಗಿ ಕಲಿಸಲಾಗುತ್ತಿದ್ದು, ಉತ್ತಮ ಸ್ಪಂದನ ದೊರಕುತ್ತಿದೆ. ಆದರೆ ಪದವಿ ಕಾಲೇಜುಗಳಲ್ಲಿ ಕನ್ನಡ ಪ್ರಥಮ ಭಾಷೆ ಕಡ್ಡಾಯವಾಗಿರುವುದರಿಂದ ಹಾಗೂ ಮತ್ತೊಂದೇ ಭಾಷೆ ಆಯ್ಕೆ ಮಾಡಲು ಅವಕಾಶವಿರುವ ಕಾರಣ ೨ನೇ ಭಾಷೆಯಾಗಿ ಆಂಗ್ಲ ಭಾಷೆಯನ್ನೇ ವಿದ್ಯಾರ್ಥಿಗಳು ಆಯ್ಕೆ ಮಾಡುತ್ತಾರೆ. ಆಂಗ್ಲ ಭಾಷೆಯ ಬದಲು ಕೊಡವ ಭಾಷೆ ಆಯ್ಕೆ ಮಾಡಿದ್ದ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಚರ್ಚಿಸಿ ತಮ್ಮ ಇಚ್ಛೆಯನ್ನು ಬದಲಾಯಿಸಿ ಆಂಗ್ಲ ಭಾಷೆಯನ್ನೇ ಆಯ್ಕೆ ಮಾಡುವುದರಿಂದ ಪದವಿ ಕಾಲೇಜುಗಳಲ್ಲಿ ಕೊಡವ ಕಲಿಕೆಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ಪಾರ್ವತಿ ಅಪ್ಪಯ್ಯ ಅವರು ಮಾಹಿತಿ ನೀಡಿದರು.