ಗೋಣಿಕೊಪ್ಪಲು, ಜ. ೧೨: ತೂಚಮಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ೫೦ ಮಂದಿ ಮೊಕಾಂ ಹೂಡಿದ್ದು ಹುಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎರಡು ಸಾಕಾನೆಗಳ ಸಹಾಯ ಪಡೆದ ಇಲಾಖೆಯ ಅರವಳಿಕೆ ತಜ್ಞರಾದ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಡಾ.ರಮೇಶ್ ಹಾಗೂ ಇತರೆ ಸಿಬ್ಬಂದಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ವೀರಾಜಪೇಟೆ ಡಿಎಫ್‌ಓ ಚಕ್ರಪಾಣಿ ಕೂಂಬಿAಗ್ ನಡೆಯುತ್ತಿ ರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಕಾರ್ಯಾಚರಣೆಗೆ ಬೇಕಾದ ಸವಲತ್ತುಗಳ ವಿವರ ಪಡೆದ ಡಿಎಫ್‌ಓ ಅಗತ್ಯವಿದ್ದರೆ ತಿತಿಮತಿ ಕ್ಯಾಂಪ್ ನಲ್ಲಿರುವ ಸಿಬ್ಬಂದಿಗಳ ಸಹಕಾರ ಪಡೆಯಲು ಸೂಚನೆ ನೀಡಿದರು. ಕೂಂಬಿAಗ್ ಕಾರ್ಯಾಚರಣೆ ಯಲ್ಲಿ ತಿತಿಮತಿ ಮತ್ತಿಗೋಡು ಸಾಕಾನೆಗಳ ಶಿಬಿರದಿಂದ ಮಹೇಂದ್ರ ಹಾಗೂ ಭೀಮ ಎರಡು ಆನೆಗಳು ಪಾಲ್ಗೊಂಡಿವೆ.
ಆನೆಗಳ ಮಾವುತರಾದ ರಾಜಣ್ಣ ಹಾಗೂ ಗುಂಡು ಮತ್ತಿತರರನ್ನು ವಿಚಾರಿಸಿದ ಡಿಎಫ್‌ಓ ಚಕ್ರಪಾಣಿ ಕಾರ್ಯಾಚರಣೆ ವೇಳೆ ಅತ್ಯಂತ ಎಚ್ಚರಿಕೆ ವಹಿಸುವಂತೆ ಸಲಹೆಯಿತ್ತರು.
ತಿತಿಮತಿ ವಲಯದ ಎಸಿಎಫ್ ಉತ್ತಪ್ಪ, ನಾಗರಹೊಳೆ ರಾಷ್ಟಿçÃಯ ಉದ್ಯಾನದ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್.ಎಫ್.ಓ. ರಾಜಪ್ಪ, ದಿವಾಕರ್ ಹಾಗೂ ಇತರ ಅಧಿಕಾರಿಗಳು ಹುಲಿಯ ಸೆರೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.
ದ. ಕೊಡಗಿನ ವಿವಿಧ ಪ್ರದೇಶ ದಲ್ಲಿ ನಿರಂತರ ಹುಲಿ ದಾಳಿ ಹಿನ್ನೆಲೆಯಲ್ಲಿ ವ್ಯಾಘ್ರನ ಸೆರೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಗಳಿಂದ ಆದೇಶ ಹೊರಬಿದ್ದ ಹಿನ್ನೆಲೆ ಯಲ್ಲಿ ನುರಿತ ಅಳವಡಿಕೆ ತಜ್ಞರು, ವೈದ್ಯರು ಕ್ಯಾಂಪ್‌ನಲ್ಲಿ ಉಳಿದು ಕೊಂಡಿದ್ದಾರೆ. -ಹೆಚ್.ಕೆ. ಜಗದೀಶ್