ಸಿದ್ದಾಪುರ, ಜ. ೧೨: ಹಾಡಿಗಳ ನಿವಾಸಿಗಳ ಮನೆ ಬಳಿ ಇರುವ ಮರಗಳನ್ನು ತೆರವುಗೊಳಿಸಬೇಕೆಂದು ಆದಿವಾಸಿ ಮುಖಂಡರು ಆಗ್ರಹಿಸಿದರು. ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ದಿಡ್ಡಳ್ಳಿ ಹಾಡಿಗೆ ಭೇಟಿ ನೀಡಿದ ಆದಿವಾಸಿ ಹೋರಾಟಗಾರ ಹಾಗೂ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಮಾತನಾಡಿ ತಲಾತಲಾಂತರದಿAದ ಅರಣ್ಯವನ್ನು ಉಳಿಸಿ ಬೆಳೆಸಿರುವ ಆದಿವಾಸಿಗಳು ಅರಣ್ಯದಲ್ಲಿ ವಾಸ ಮಾಡಿಕೊಂಡಿದ್ದಾರೆ. ಆದಿವಾಸಿಗಳು ವಾಸ ಮಾಡಿಕೊಂಡಿರುವ ಮನೆಗಳ ಬಳಿ ಬೃಹತ್ ಗಾತ್ರದ ಕಾಡು ಮರಗಳಿದ್ದು, ಗಾಳಿ-ಮಳೆಯ ಸಂದರ್ಭದಲ್ಲಿ ಕೊಂಬೆಗಳು ಬಿದ್ದು ಮನೆ ಹಾನಿಯಾಗುತ್ತಿದೆ ಎಂದರು.
ಈ ಬಗ್ಗೆ ಸಂಬAಧಪಟ್ಟ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು. ಇದೀಗ ಐಟಿಡಿಪಿ ಇಲಾಖೆಯಿಂದ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಆದಿವಾಸಿಗಳಿಗೆ ನಿರ್ಮಾಣ ಮಾಡುತ್ತಿರುವ ಮನೆಗಳ ಬಳಿ ಮರ ಇರುವುದರಿಂದ ಸಮಸ್ಯೆಯಾಗಿದೆ. ಕೂಡಲೇ ಮರಗಳನ್ನು ತೆರವುಗೊಳಿಸದಿದ್ದಲ್ಲಿ ಆದಿವಾಸಿಗಳು ಸೇರಿ ಅರಣ್ಯ ಇಲಾಖಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ರಾ.ಪಂ. ಸದಸ್ಯೆ ಶೋಭ ಮಾತನಾಡಿ, ಹಾಡಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯಗಳು ಸಿಗದೇ ಆದಿವಾಸಿಗಳು ಸಮಸ್ಯೆಯಲ್ಲಿದ್ದಾರೆ. ಈ ಬಗ್ಗೆ ಸಚಿವರುಗಳು ಹಾಗೂ ಜಿಲ್ಲಾಡಳಿತ ಸ್ಪಂದಿಸಿ ಹಾಡಿಗಳಿಗೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಹಾಡಿಯ ನಿವಾಸಿಗಳಾದ ಮಾದೇವ, ಲಕ್ಷಿö್ಮ, ಸಿದ್ದೇಶ್, ಗಂಗೆ, ರಾಜೇಶ್, ರೋಹಿಣಿ, ದೀನು, ಬಸವ, ರಾಧ, ಸುಭಾಷ್ ಇನ್ನಿತರರು ಹಾಜರಿದ್ದರು. -ವಾಸು