ನಾಪೋಕ್ಲು, ಜ. ೧೩: ಕೊಡಗಿನ ಬೆಳೆಗಾರರಿಗೆ ಸರಕಾರವು ಸುಮಾರು ೬೨ ಕೋಟಿ ರೂಗಳ ಪರಿಹಾರವನ್ನು ನೀಡಿದೆ. ಇದರಿಂದ ೪೨ ಸಾವಿರ ಜನರಿಗೆ ಅನುಕೂಲವಾಗಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕಕ್ಕಬ್ಬೆ, ಕುಂಜಿಲ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಡಿಜಿಟಲ್ ಗ್ರಂಥಾಲಯ, ಸಭಾಂಗಣ, ಗ್ರಾಮ ಲೆಕ್ಕಿಗರ ಕಚೇರಿ ಇತ್ಯಾದಿ ವ್ಯವಸ್ಥೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸುಮಾರು ೨ ಸಾವಿರದಿಂದ ೩೬ ಸಾವಿರದವರೆಗೆ ಭತ್ತ, ಕಾಫಿ, ಅಡಿಕೆ, ಬಾಳೆ ಬೆಳೆಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯಿAದ ಜನರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗ್ರಂಥಾಲಯಕ್ಕೆ ಬೇಕಾದ ಅವಶ್ಯ ಪುಸ್ತಕಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿö್ಮ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ನ ಅಯ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ರಂಶೀನ, ಸದಸ್ಯರುಗಳು, ಯೋಜನಾ ಅಧಿಕಾರಿ ಶ್ರೀಕಂಠವÆರ್ತಿ ಮತ್ತಿತರರು ಇದ್ದರು. ಪಿ.ಡಿ.ಓ. ಅಶೋಕ. ಸ್ವಾಗತಿಸಿ ನಿರೂಪಿಸಿದರು. ಕೋಡಿಮಣಿಯಂಡ ಬೋಪಯ್ಯ ಪ್ರಾರ್ಥಿಸಿ ಕಲಿಯಂಡ ಭೀನಾ ಸುಚಿತ್ರ ವಂದಿಸಿದರು.
ರೈತರಿಗೆ ಪರಿಹಾರ ತಲುಪಿದೆ - ಈಶ್ವರ್
ಮಳೆಯಿಂದ ಹಾನಿಗೊಳಗಾದ ಕೊಡಗಿನ ರೈತರಿಗೆ ಬೆಳೆ ಪರಿಹಾರ ಲಭಿಸಿದೆ ಎಂದು ವೀರಾಜಪೇಟೆ ಮಂಡಲ ಬಿಜೆಪಿಯ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ್ ಮಾಹಿತಿ ಒದಗಿಸಿದರು.
ಗೋಣಿಕೊಪ್ಪಲುವಿನ ಬಿಜೆಪಿ ಕಚೇರಿಯಲ್ಲಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಈಶ್ವರ್, ಈಗಾಗಲೇ ಶಾಸಕರಾದ ಕೆ.ಜಿ.ಬೋಪಯ್ಯ ಈ ನಿಟ್ಟಿನಲ್ಲಿ ಕಾಫಿ ಬೋರ್ಡ್, ಕೃಷಿ ಇಲಾಖೆ ಹಾಗೂ ತೋಟಗಾರಿಕೆಯ ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸರ್ಕಾರದ ಮಟ್ಟದಲ್ಲಿ ರೈತರಿಗೆ ಸಿಗಬೇಕಾದ ಬೆಳೆ ಪರಿಹಾರ ಬಗ್ಗೆ ವಿಶೇಷ ಗಮನ ಹರಿಸಿ ಬೆಳೆ ಪರಿಹಾರ ಮಂಜೂರು ಮಾಡಿಸಿದ್ದಾರೆ.
ಕೆಲವು ತಾಂತ್ರಿಕ ಕಾರಣದಿಂದಾಗಿ ೭೦೦ ರೈತರಿಗೆ ಬೆಳೆ ಪರಿಹಾರ ಲಭಿಸಿಲ್ಲ. ಈ ಬಗ್ಗೆ ಅಂತಹ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಖುದ್ದು ಭೇಟಿ ನೀಡಿ ಅಗತ್ಯ ದಾಖಲೆ ಒದಗಿಸಿ ಪರಿಹಾರ ಪಡೆಯುವಂತೆ ತಿಳಿಸಿದರು.
ಸರ್ಕಾರ ೧೨ ಹಂತದಲ್ಲಿ ಬೆಳೆ ಪರಿಹಾರ ಮಂಜೂರು ಮಾಡಿದ್ದು ೪೭,೧೪೪ ರೈತರು ಪರಿಹಾರ ಪಡೆದಿದ್ದಾರೆ.
ಟಿ. ಶೆಟ್ಟಿಗೇರಿ ಬಳಿ ಚಟ್ಟಂಗಡ ರೇವತಿ ಹಾಗೂ ಮಗ ಕಾರ್ಯಪ್ಪ ಹೊಳೆಯಲ್ಲಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬAಧಿಸಿದAತೆ ಶಾಸಕರು ಇವರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ಒದಗಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಮೋರ್ಚಾ ಪ್ರ.ಕಾರ್ಯದರ್ಶಿ ತೋರಿರ ವಿನು, ಕಾರ್ಯದರ್ಶಿ ಅಡ್ಡಂಡ ನಿಲನ್ ಮಂದಣ್ಣ ಉಪಸ್ಥಿತರಿದ್ದರು.