ಸೋಮವಾರಪೇಟೆ, ಜ. ೧೩: ಸರ್ಕಾರಿ ದಾಖಲೆಗಳಲ್ಲಿ ಕಡಂಗ ಎಂದು ನಮೂದಾಗಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಆ ಮೂಲಕ ಸ್ಥಳೀಯ ನಿವಾಸಿಗಳು ನಡೆಸಿದ್ದ ಧರಣಿಗೆ ಪ್ರತಿಫಲ ದೊರೆತಂತಾಗಿದೆ.
ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗರೂರು ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಕಡಂಗ ಜಾಗವಿದ್ದು, ಇದಕ್ಕೆ ಒತ್ತಿಕೊಂಡAತೆ ತಾರಾ ಮಂಜು ಎಂಬವರಿಗೆ ಸೇರಿದ ತೋಟವಿದೆ. ಸ್ಥಳೀಯರು ಕಡಂಗ ಜಾಗವನ್ನು ನಡೆದಾಡಲು ಬಳಸುತ್ತಿದ್ದರು. ಕಳೆದ ೨೦೧೯ರಂದು ಈ ಜಾಗವನ್ನು ಒಳಗೊಂಡAತೆ ತೋಟ ಮಾಲೀಕರು ಬೇಲಿ ಹಾಕಿಕೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ತಡೆಯಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳ ಗಮನ ಸೆಳೆದ ಹಿನ್ನೆಲೆ, ಒತ್ತುವರಿ ತೆರವುಗೊಳಿಸುವಂತೆ ಸರ್ವೆ ಇಲಾಖೆಗೆ ಸೂಚಿಸಲಾಗಿತ್ತು. ಇಲಾಖೆಯಿಂದ ತೋಟದ ಮಾಲೀಕರಿಗೆ ನಿರ್ದೇಶನ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸ್ಥಳೀಯ ನಿವಾಸಿ ಲೋಕೇಶ್ (ರವಿ) ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ, ರೈತ ಸಂಘದ ಸಹಕಾರದೊಂದಿಗೆ ಕಳೆದ ಡಿಸೆಂಬರ್ ೬ ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಡಂಗ ಜಾಗ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು, ಸರ್ವೆ ಇಲಾಖೆಗೆ ಸೂಚನೆ ನೀಡಿ, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಕಾರ್ಯೋನ್ಮುಖರಾದ ಅಧಿಕಾರಿಗಳು ಬಳಗುಂದ ಗ್ರಾಮದ ಸ.ನಂ. ೧೦೦/೧ರ ಜಮೀನಿನಲ್ಲಿ ಹಾದು ಹೋಗುವ ಕಡಂಗ ಜಾಗವನ್ನು ಗುರುತಿಸಿ, ಗ್ರಾಮಸ್ಥರ ಸಮಕ್ಷಮ ಸರ್ವೆ ನಡೆಸಿ, ಸರ್ವೆ ಇಲಾಖೆಯ ಗ್ರಾಮ ನಕಾಶೆಯಲ್ಲಿ ದಾಖಲಿದ್ದ ಕಡಂಗವನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿದರು. ಕಾರ್ಯಾಚರಣೆ ಸಂದರ್ಭ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.