ಗೋಣಿಕೊಪ್ಪಲು, ಜ.೧೦: ಸರ್ಕಾರದ ನಿಯಮದಂತೆ ವಾರಾಂತ್ಯದ ಎರಡು ದಿನಗಳ ಕರ್ಫ್ಯೂ ಸಡಿಲಗೊಳ್ಳುತ್ತಿದ್ದಂತೆಯೇ ಸೋಮವಾರ ಮುಂಜಾನೆಯ ೬ ಗಂಟೆಯಿAದಲೇ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನೂಕು ನುಗ್ಗಲಿನಿಂದ ಹೈರಾಣಾದರು. ಕೊರೆಯುವ ಚಳಿಯ ನಡುವೆ ಆಗಮಿಸಿದ ಮಹಿಳೆಯರು, ಮಕ್ಕಳು ಬಸ್ ಗಾಗಿ ಕಾದು ಸುಸ್ತಾದರು.
ವೀರಾಜಪೇಟೆ ಬಸ್ ನಿಲ್ದಾಣದಿಂದ ಬರುತ್ತಿದ್ದ ಪ್ರತಿ ಬಸ್ ನಲ್ಲಿ ಸೀಟ್ ಇಲ್ಲದೇ ನೂರಾರು ಸಂಖ್ಯೆಯ ಪ್ರಯಾಣಿಕರು ವಿಧಿ ಇಲ್ಲದೇ ತಮ್ಮ ಲಗೇಜು ಸಹಿತ ನಿಂತುಕೊAಡೇ ವಾಣಿಜ್ಯ ನಗರ ಗೋಣಿಕೊಪ್ಪಲುವಿನಿಂದ ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಊರುಗಳಿಗೆ ಪ್ರಯಾಣ ಬೆಳೆಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ತಮ್ಮ ತಮ್ಮ ಮನೆಗೆ ಆಗಮಿಸಿದ್ದ ನಾಗರಿಕರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮತ್ತೆ ನಗರ ಪ್ರದೇಶಗಳಿಗೆ ಮರಳಲು ಗೋಣಿಕೊಪ್ಪ ನಗರ ಬಸ್ ನಿಲ್ದಾಣಕ್ಕೆ ಸೋಮವಾರ ಮುಂಜಾನೆಯಿAದಲೇ ಆಗಮಿಸಿದ್ದರು.
ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನದವರೆಗೂ ಎಲ್ಲಾ ಸರ್ಕಾರಿ ಬಸ್ ಗಳು ತುಂಬಿದ್ದ ಪ್ರಯಾಣಿಕರ ಒತ್ತಡ ನಡುವೆ ಚಲಿಸಿದವು. ವಾರಾಂತ್ಯದ ಕರ್ಫ್ಯೂ ನಿಂದಾಗಿ ಇಂತಹ ಸಮಸ್ಯೆ ಎದುರಾಯಿತು ಎಂದು ದೂರದ ಊರಿಗೆ ಪ್ರಯಾಣಕ್ಕೆ ಆಗಮಿಸಿದ್ದ ಪ್ರಯಾಣಿಕ ತಮ್ಮ ನೋವನ್ನು ತೋಡಿ ಕೊಂಡರು.
- ಹೆಚ್.ಕೆ.ಜಗದೀಶ್