ಮಡಿಕೇರಿ, ಜ. ೧೦: ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಎಫ್೧ ಕೋಟೆ ಮತ್ತು ಎಫ್ ೫ ಜಿ.ಟಿ.ರೋಡ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಪೆನ್‌ಷನ್ ಲೇನ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕೊಹಿನೂರು ರಸ್ತೆ, ಕೈಗಾರಿಕಾ ಬಡಾವಣೆ, ಚೈನ್ ಗೇಟ್, ಸುದರ್ಶನ ವೃತ್ತ, ಸಿದ್ದಾಪುರ ರಸ್ತೆ, ಜಿ.ಟಿ. ರಸ್ತೆ, ಜಯನಗರ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹಾಗೆಯೇ ಮೂರ್ನಾಡು ೩೩/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಹೊದ್ದೂರು ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ಜನವರಿ, ೧೧ ರಂದು ಬೆಳಗ್ಗೆ ೧೦ ಗಂಟೆ ಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಲಾಗುವುದು.

ಕಬಡಗೇರಿ, ಹೊದ್ದೂರು, ಕುಂಬಳದಾಳು, ಅಯ್ಯಂಗೇರಿ, ಹಳೆ ತಾಲೂಕು, ಚೂನಕೆರೆ, ನೆಲ್ಜಿ, ಎಮ್ಮೆಮಾಡು, ಬಲ್ಲಮಾವಟಿ, ಕೊಳಕೇರಿ, ಕುಂಜಿಲ, ಕಕ್ಕಬೆ, ಯುವಕಪಾಡಿ, ಪೆರೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳ್ಲಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.