ಪೊನ್ನಂಪೇಟೆ, ಡಿ.೧೦: ಜೀವನದಲ್ಲಿ ಗುರಿ ಸಾಧಿಸಲು ಪ್ರೇರಣೆ ಬಹುಮುಖ್ಯ. ಈ ಪ್ರೇರಣೆ ಸಕ್ರಿಯಗೊಳ್ಳಲು ಉತ್ಸಾಹ ಅತ್ಯಗತ್ಯ. ಉತ್ಸಾಹವಿದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಜೇಸಿಸ್‌ನ ಹಿರಿಯ ತರಬೇತುದಾರರು ಮತ್ತು ಶ್ರೀರಂಗಪಟ್ಟಣ ಪರಿವರ್ತನಾ ವಸತಿ ಶಾಲೆಯ ಡೀನ್ ಆರ್. ಎ. ಚೇತನ್ ರಾಮ್ ಹೇಳಿದರು.

ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ನಡೆದ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ೧೧ನೇ ಘಟಕಾಡಳಿತ ಮಂಡಳಿಯ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಉತ್ಸಾಹವೇ ಪ್ರತಿಯೊಬ್ಬ ಮನುಷ್ಯನ ದೈನಂದಿನ ಬದುಕಿನ ತಳಹದಿ. ಉತ್ಸಾಹದ ಕೊರತೆ ಜನರನ್ನು ನಿರುತ್ಸಾಹಿಗಳಾಗಿ ಮಾಡುತ್ತದೆ. ಮನುಷ್ಯನಲ್ಲಿ ಯಾವುದೇ ಕಾರಣಕ್ಕೂ ಉತ್ಸಾಹ ಕಡಿಮೆಯಾಗಬಾರದು. ಪ್ರತಿಯೊಬ್ಬರೂ ಭವಿಷ್ಯದ ಬದುಕಿನ ಬಗ್ಗೆ ಆಶಾವಾದಿಗಳಾಗಿರಬೇಕು ಎಂದು ಕಿವಿಮಾತು ಹೇಳಿದರು.

ಚಿಕ್ಕಂದಿನಿAದಲೇ ಉತ್ಸಾಹ ಮೂಡಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು. ಪ್ರಜಾತಂತ್ರ ವ್ಯವಸ್ಥೆಯ ಆರಂಭಿಕ ಶಿಕ್ಷಣವನ್ನು ತಾಯಿಯೇ ಮನೆಯಲ್ಲಿ ಮೊದಲು ನೀಡುತ್ತಾರೆ. ಈ ಕಾರಣದಿಂದಲೇ ತಾಯಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ಅಧಿಪತಿ ಎಂದು ಕರೆಸಿಕೊಳ್ಳುತ್ತಾರೆ ಎಂದು ಉದಾಹರಣೆಯ ಮೂಲಕ ವಿವರಿಸಿದ ಅವರು, ಪ್ರತಿಯೊಬ್ಬನ ಬದುಕು ರೂಪಿಸುವಲ್ಲಿ ತಾಯಿಯ ‘ಮನೆಪಾಠ'ಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತಾಯಿಯನ್ನು ಹೊರತುಪಡಿಸಿ ‘ಜೀವನ ಪಾಠ' ಬೋಧಿಸುವ ಮತ್ತೊಂದು ಮಹಾಸಂಸ್ಥೆಯೇ ಜೆ.ಸಿ.ಐ. ಎಂದು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಜೇಸಿಸ್ ನ ವಲಯ ೧೪ರ ನಿಕಟಪೂರ್ವ ವಲಯಾಧ್ಯಕ್ಷರು ಮತ್ತು ಜೆಸಿಐ ಭಾರತದ ಅಧಿಕೃತ ಸಂಚಿಕೆಯ ಸಂಪಾದಕ ಮಂಡಳಿಯ ಮುಖ್ಯಸ್ಥರೂ ಆಗಿರುವ ಸೆನೆಟರ್ ಭರತ್ ಎನ್. ಆಚಾರ್ಯ ಮಾತನಾಡಿ, ವ್ಯಕ್ತಿತ್ವ ವಿಕಸನವೇ ಜೇಸಿಸ್ ನ ಮೂಲ ಗುರಿ. ಸೇವೆಗಿಂತ ಮೊದಲು ಸೇವೆಗೈಯುವ ವಿಧಾನ ಮತ್ತು ಉದ್ದೇಶ ಮುಖ್ಯವಾಗಿರುತ್ತದೆ. ಈ ಕುರಿತು ಸ್ಪಷ್ಟ ಆಶಯ ಹೊಂದಿರುವ ಸಮಾಜ ಸೇವಕರನ್ನು ಸೃಷ್ಟಿಸುವ ಸ್ವಯಂ ಕಲಿಕಾ ವಿಶ್ವವಿದ್ಯಾಲಯವೇ ಜೇಸಿಸ್. ಅಲ್ಲದೆ ಈ ಮಹಾ ಸಂಸ್ಥೆಯಿAದ ಸಂಪಾದಿಸಲ್ಪಡುವ ಜನರು ಜೀವನ ಪರ್ಯಂತ ಸ್ನೇಹಿತರಾಗಿರುತ್ತಾರೆ ಎಂದು ತಿಳಿಸಿದರು.

ವಲಯ ೧೪ರ ‘ಡಿ' ಪ್ರಾಂತ್ಯದ ವಲಯ ಉಪಾಧ್ಯಕ್ಷೆ ಯಶಸ್ವಿನಿ ಅವರು ಘಟಕಕ್ಕೆ ಸೇರ್ಪಡೆಯಾದ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಜೇಸಿಸ್‌ನಲ್ಲಿ ಇಂದು ಸಾಕಷ್ಟು ವಿಪುಲ ಅವಕಾಶಗಳಿವೆ. ವ್ಯವಹಾರ, ತರಬೇತಿ, ಸ್ನೇಹಮಿಲನ, ಸಂಪರ್ಕ ಮೊದಲಾದ ಮನುಷ್ಯನಿಗೆ ತನ್ನ ವಿಕಸನಕ್ಕಾಗಿ ಅಗತ್ಯವಿರುವ ಪೂರಕ ವ್ಯವಸ್ಥೆಗಳ ಬಾಗಿಲು ಆಸಕ್ತರಿಗೆ ಇಲ್ಲಿ ಸದಾ ತೆರೆದಿರುತ್ತದೆ. ಜೆ.ಸಿ.ಐ. ಎಂಬುದು ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂಬ ಅಚಲ ನಂಬಿಕೆಯೊAದಿಗೆ ವಿಶ್ವದ ಎಲ್ಲಾ ದೇಶಗಳಲ್ಲಿರುವ ಏಕೈಕ ಅಂತರಾಷ್ಟಿçÃಯ ಯುವ ಸಂಘಟನೆಯಾಗಿದೆ. ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬ ಸತ್ಯವನ್ನು ಜಗತ್ತಿಗೆ ಹೇಳಿದ ಸಂಸ್ಥೆಯಿದು ಎಂದು ಬಣ್ಣಿಸಿದರು.

ಘಟಕದ ೧೧ನೇ ಅಧ್ಯಕ್ಷರಾಗಿ ಆಯ್ಕೆಗೊಂಡ ಎ. ಪಿ. ದಿನೇಶ್ ಅವರಿಗೆ ನಿರ್ಗಮಿತ ಅಧ್ಯಕ್ಷ ಎಂ. ಎನ್. ವನಿತ್ ಕುಮಾರ್ ಅವರು ಪ್ರಮಾಣ ವಚನ ಬೋಧಿಸಿ, ನಂತರ ಅಧ್ಯಕ್ಷರ ಕಾಲರ್ ಮತ್ತು ಗ್ಯಾವಲ್ ಅನ್ನು ಹಸ್ತಾಂತರಿಸಿದರು. ಘಟಕಾಡಳಿತ ಮಂಡಳಿಯ ಉಳಿದ ಪದಾಧಿಕಾರಿಗಳಿಗೆ ನೂತನ ಅಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಎಂ.ಪಿ. ಬೋಪಣ್ಣ, ಪಾಲೂರಿನ ಪಿ.ಬಿ. ಗೌತಮ್, ಕಂಡAಗಾಲದ ಎ.ಎಂ. ಬೋಪಣ್ಣ, ಕುಮಟೂರಿನ ಬಿ.ಎನ್. ಚಂಗಪ್ಪ, ಪೊನ್ನಂಪೇಟೆಯ ಕೆ. ಯು. ತನು ತಿಮ್ಮಯ್ಯ ಮತ್ತು ಗೋಣಿಕೊಪ್ಪಲಿನ ಟಿ.ಜೆ. ಅಂತೋಣಿ ಅವರು ಘಟಕಕ್ಕೆ ನೂತನ ಸದಸ್ಯರಾಗುವ ಮೂಲಕ ಜೇಸಿಸ್ ಗೆ ಸೇರ್ಪಡೆಯಾದರು.

ನಿಕಟಪೂರ್ವ ಅಧ್ಯಕ್ಷ ಟಾಟು ಮೊಣ್ಣಪ್ಪ ಅವರ ಕುರಿತು ಬೀಳ್ಕೊಡುಗೆ ನುಡಿಗಳನ್ನಾಡಿದ ಎಸ್. ಎಂ.ಎ ವಿಭಾಗದ ವಲಯ ಸಂಯೋಜಕರಾದ ಬಿ.ಈ.ಕಿರಣ್, ಅವರನ್ನು ಪೂರ್ವಾಧ್ಯಕ್ಷರ ಸಾಲಿಗೆ ಬರಮಾಡಿಕೊಂಡರು. ವೇದಿಕೆಯಲ್ಲಿ ಜೆಸಿಐ ಭಾರತದ ಎಸ್.ಎಂ.ಎ. ರಾಷ್ಟಿçÃಯ ಮಂಡಳಿ ನಿರ್ದೇಶಕ ಎ.ಎಸ್. ನರೇನ್ ಕಾರ್ಯಪ್ಪ, ಎಸ್.ಎಂ.ಎ. ವಲಯ ಮಂಡಳಿ ಮುಖ್ಯಸ್ಥ ಮೈಸೂರಿನ ಕೆ.ಎಸ್. ಕುಮಾರ್, ಘಟಕದ ನಿರ್ಗಮಿತ ಜೇಸಿರೇಟ್ ವಿಭಾಗದ ಮುಖ್ಯಸ್ಥೆ ಜಸ್ಮಿ ಬೋಪಣ್ಣ, ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥ ಎ.ಡಿ.ಚರಣ್ ಚಂಗಪ್ಪ ಉಪಸ್ಥಿತರಿದ್ದರು.

ಡಾ. ಬಿ.ಎಂ. ಗಣೇಶ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ನಿಖಿತಾ ಸ್ವಾಮಿ ಜೇಸಿವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ಸ್ವಾಗತಿಸಿದರು. ಎಚ್.ಆರ್. ಸತೀಶ್, ಎಂ.ಎಸ್. ಸರ್ಫುದ್ದೀನ್, ಹರೀಶ್ ಅತಿಥಿಗಳನ್ನು ಪರಿಚಯಿಸಿದರು. ಪಿ.ಪಿ. ಬಿದ್ದಪ್ಪ ನೂತನ ಸದಸ್ಯರನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಶರತ್ ಸೋಮಣ್ಣ ವಂದಿಸಿದರು.