ಪೊನ್ನಂಪೇಟೆ, ಜ. ೧೦: ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಡಿಕೇರಿ ಹಾಗೂ ಪೊನ್ನಂಪೇಟೆಯ ಜೈ ಭೀಮ್ ಕಲಾ ತಂಡದ ಸಂಯುಕ್ತ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ ಪೊನ್ನಪ್ಪಸಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಯೋಜಿತ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಸ್ಡಿಎಂಸಿ ಅಧ್ಯಕ್ಷೆ ಅಸ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಸುಶೀಲ ಉದ್ಘಾಟಿಸಿದರು. ಕಲಾ ತಂಡದ ಸದಸ್ಯರಾದ ಎಸ್.ಟಿ. ಗಿರೀಶ್, ಜಿ. ನಿರ್ಮಲ, ಎಸ್.ಜಿ. ಶರತ್ ಕುಮಾರ್, ಹೆಚ್.ಜಿ. ರಂಜಿತ, ನಿತಿನ್ ಹಾಗೂ ಅವಿನಾಶ್ ಅವರುಗಳು ಗೀಗಿಪದ, ಪರಿಸರ ಗೀತೆ, ಲಾವಣಿ, ಭಾವಗೀತೆ ಹಾಗೂ ಜನಪದ ಗೀತೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಸಹ ಶಿಕ್ಷಕಿ ಪ್ರೇಮ ಕುಮಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.