ಶನಿವಾರಸಂತೆ, ಜ. ೧೦ : ಪಟ್ಟಣದಲ್ಲಿ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ನಡೆದ ೨ನೇ ಡಿಗ್ರಿ ಬ್ಲಾö್ಯಕ್ ಬೆಲ್ಟ್ ಪರೀಕ್ಷೆಯಲ್ಲಿ ಶನಿವಾರಸಂತೆ, ಕೂಡಿಗೆ, ಸೋಮವಾರಪೇಟೆ, ಪಿರಿಯಾಪಟ್ಟಣ ಹಾಗೂ ಹುಣಸೂರಿನ ಕರಾಟೆ ಪಟುಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಅಭಿಶ್ರೀ, ದರ್ಶನ್, ಸಂಶೀರ್, ಯೋಗೇಶ್, ಪಿ.ಎ. ದರ್ಶನ್, ಭರತ್, ವಿನಯ್, ಗೌತಮಿ, ಮೋನಿಷ್, ನಮಿತಾ, ಶರಣ್ಯ, ಅಜಿತ್, ಸಂಜು, ವಿನೋದ್ ಭಾಗವಹಿಸಿ ೨ನೇ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾರೆ. ಪರೀಕ್ಷಕರಾಗಿ ಹಿರಿಯ ತರಬೇತುದಾರ ಅರುಣ್, ತರಬೇತುದಾರರಾದ ಪಳನಿ, ವಿಷ್ಣು, ಸಂಕೇತ್, ಚಂದ್ರು, ಸಚಿನ್, ಕನ್ನಿಕಾ ಕಾರ್ಯನಿರ್ವಹಿಸಿದರು.