ಶನಿವಾರಸಂತೆ, ಜ. ೭: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಯುವಕ ದರ್ಶನ್ (೩೦) ತಾ.೨ರಂದು ನಾಪತ್ತೆಯಾಗಿದ್ದು, ಇಂದು ಕೊಡ್ಲಿಪೇಟೆಯ ಪಾಂಡುರAಗ ದೇವಸ್ಥಾನದ ಬಳಿಯಲ್ಲಿ ಮೃತದೇಹ ಗೋಚರಿಸಿದೆ.

ತಾಯಿ ದೇವಕಿಯವರೊಂದಿಗೆ ವಾಸಿಸುತ್ತಿದ್ದ ದರ್ಶನ್ ೨ ವರ್ಷದ ಹಿಂದೆ ವಿವಾಹವಾಗಿದ್ದು, ಅವರಿಗೆ ೯ ತಿಂಗಳ ಗಂಡುಮಗುವಿದೆ. ಪತ್ನಿ ಅನಿತಾ ತವರು ಮನೆಗೆ ಹೋಗಿದ್ದು, ತಾ. ೨ರಂದು ಮನೆಯಿಂದ ಹೊರಗೆ ಹೋದ ದರ್ಶನ್ ಮನೆಗೆ ವಾಪಸ್ ಬಂದಿರಲಿಲ್ಲ. ೫ ದಿನಗಳ ಬಳಿಕ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದರ್ಶನ್ ಮೃತದೇಹ ಗೋಚರಿಸಿದೆ. ಮೃತ ದರ್ಶನ್ ಮದ್ಯವ್ಯಸನಿ ಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಅನಿತಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.

ಶನಿವಾರಸಂತೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಡ್‌ಕಾನ್ಸ್ಟೇಬಲ್ ನೆಹರೂ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.