ಕೂಡಿಗೆ, ಜ. ೭: ಸಾಮಾಜಿಕ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಕೈಗೊಂಡ ಕ್ರಮವನ್ನು ವಿರೋಧಿಸಿ ಹುದುಗೂರು ಕಾಳಿದೇವನ ಹೊಸೂರು ಗ್ರಾಮದ ಜನ ಜಾಗೃತಿ ರೈತ ಸಂಘ ಜಾಗದ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಹುದುಗೂರು ಗ್ರಾಮದ ಸಾಮಾಜಿಕ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿರುವ ಪಶು ವೈದ್ಯ ಕೇಂದ್ರ ಮತ್ತು ಅದಕ್ಕೆ ಹೊಂದಿಕೊAಡಿರುವ ಗೋಸದನದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಏಕಾಏಕಿ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ. ಇದು ಸ್ಥಳೀಯರ ಆಕ್ಷೇಪಕ್ಕೂ ಕಾರಣವಾಗಿದೆ.
ಹುದುಗೂರು ಗ್ರಾಮದ ಸರ್ವೆ ನಂಬರ್ ೨/೧ರ ೨ ಎಕರೆ ೨೦ ಸೆಂಟ್ ಜಾಗದ ಪೈಕಿ ಗೋಸದನದ ಕಟ್ಟಡವಿರುವ ೭೫ ಸೆಂಟ್ ಜಾಗವನ್ನು ಪಶುವೈದ್ಯಕೀಯ ಚಿಕಿತ್ಸಾಲಯ ಹಾಗೂ ಗೋಸದನದ ಅಭಿವೃದ್ಧಿಗೆ ಬಿಟ್ಟುಕೊಂಡುವAತೆ ಕಳೆದ ನಾಲ್ಕು ವರ್ಷಗಳಿಂದ ಸಂಬAಧಿಸಿದ ಇಲಾಖೆಗಳಿಗೆ ಪತ್ರವ್ಯವಹಾರ ಮಾಡಲಾಗಿತ್ತು. ಈ ಸಂಬAಧ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮತ್ತು ಅಗಿನ ಉಸ್ತುವಾರಿ ಸಚಿವರ ಆದೇಶದಂತೆ ಸರ್ವೆ ನಡೆಸಲು ಸೂಚನೆ ನೀಡಿದ್ದರು. ಅದರಂತೆ ಕಳೆದ ಒಂದು ವರ್ಷಗಳ ಹಿಂದೆ ೭೫ ಸೆಂಟ್ ಜಾಗದ ಸರ್ವೆ ನಡೆಸಿ ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೆಳಲಾಗಿತ್ತು. ಅದರೆ, ಕಡತವನ್ನು ಸಾಮಾಜಿಕ ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಕಳುಹಿಸದೆ ತಮ್ಮಲ್ಲಿ ಇಟ್ಟುಕೊಂಡು ಒಂದು ವರ್ಷಗಳಿಂದ ಪಾಳುಬಿದ್ದ ಈ ಜಾಗದಲ್ಲಿ ಗಿಡಗಳನ್ನು ಬೆಳೆಸಲು ಏಕಾಏಕಿ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಕಾಳಿದೇವನ ಹೊಸೂರು ಗ್ರಾಮದ ಜನ ಜಾಗೃತಿ ರೈತ ಸಂಘದ ಅಧ್ಯಕ್ಷ ಚಿಣ್ಣಪ್ಪ, ನೀರು ಬಳಕೆದಾರರ ಮಹಾಮಂಡಲದ ಮಾಜಿ ನಿರ್ದೇಶಕ ಐ.ಎಸ್. ಗಣೇಶ್, ರೈತ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ, ಗ್ರಾಮದ ಪ್ರಮುಖರಾದ ನಾಣಯ್ಯ, ಪ್ರಕಾಶ್, ಕಾಳಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಬಗ್ಗೆ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ರವೀಂದ್ರ ದೂರು ನೀಡಿದ ಹಿನ್ನೆಲೆ ಉಭಯ ಕಡೆಯವರನ್ನು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಠಾಣೆಗೆ ಕರೆಸಿ ಬೀಗ ಹಾಕಿರುವುದನ್ನು ತೆರವುಗೊಳಿಸುವಂತೆ ರೈತ ಸಂಘದ ಮುಖಂಡರಿಗೆ ತಿಳಿಸಿದರು. ಇದಕ್ಕೆ ಒಪ್ಪದ ಹಿನ್ನೆಲೆ ನಂತರ ಪ್ರಕರಣವನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಯಿತು. ಬಳಿಕ ಮೂರು ಗ್ರಾಮಗಳÀ ರೈತ ಮುಖಂಡರು ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಅಧಿಕಾರಿಗಳು ೬ ತಿಂಗಳಿನಲ್ಲಿ ಸಮಸ್ಯೆ ಪರಿಹಾರದ ಭರವಸೆ ನೀಡಿದ ಹಿನ್ನೆಲೆ ಹಾಕಿದ್ದ ಬೀಗ ತೆಗೆಯಲಾಯಿತು.
- ಕೆ.ಕೆ. ನಾಗರಾಜಶೆಟ್ಟಿ.