*ಗೋಣಿಕೊಪ್ಪ, ಜ. ೭: ಮದ್ಯಸೇವನೆಗೆ ಯೋಗ್ಯವಲ್ಲದ ರೂ. ೧೮ ಲಕ್ಷದ ೧೪ ಸಾವಿರದ ೩೧೬ ರೂಪಾಯಿ ಮೌಲ್ಯದ ೮೫೨ ಬಿಯರ್ ಪೆಟ್ಟಿಗೆಗಳನ್ನು ಕೆ.ಎಸ್.ಬಿ.ಸಿ.ಎಲ್. ವೀರಾಜಪೇಟೆ ಡಿಪ್ಪೋದಲ್ಲಿ ನಾಶಪಡಿಸಲಾಯಿತು.
ಅವಧಿ ಮೀರಿದ ಬಿಯರ್ ದಾಸ್ತಾನನ್ನು ಜಿಲ್ಲಾ ಅಬಕಾರಿ ಉಪ ಆಯುಕ್ತ ಜಗದೀಶ್ನಾಯಕ್ ಆದೇಶದಂತೆ ತಾಲೂಕು ಅಬಕಾರಿ ಉಪ ಅಧೀಕ್ಷಕ ಎಂ. ಮಹಾದೇವ್ ಅವರ ನೇತೃತ್ವದಲ್ಲಿ ನಿರೀಕ್ಷಕರಾದ ಭಾಗ್ಯ, ಉಪನಿರೀಕ್ಷಕ ಸೋಮಣ್ಣ, ಕಂದಾಯ ಅಧಿಕಾರಿಗಳಾದ ಅನುನಾಯಕ್, ಡಿಪ್ಪೋ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಬಾಟಲಿಗಳಲ್ಲಿದ್ದ ಬಿಯರನ್ನು ಪರಿಸರ ಹಾನಿಯಾಗದಂತೆ ನಾಶಪಡಿಸಲಾಯಿತು.