ಗೋಣಿಕೊಪ್ಪ ವರದಿ, ಜ. ೭ : ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿರುವ ನಾಮೇರ ನಂದಾ ಬೋಪಯ್ಯ ಸ್ಮರಣಾರ್ಥ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಟ್ರೋಫಿ ದಾನಿ ನಾಮೇರ ನರೇಶ್ ಬ್ಯಾಟ್ ಮಾಡುವ ಮೂಲಕ ಹಿರಿಯ ದಾನಿ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಬಾಲ್ ಮಾಡುವ ಮೂಲಕ ಚಾಲನೆ ನೀಡಿದರು.
ದಾನಿಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಚೆಪ್ಪುಡೀರ ಬೆಳ್ಯಪ್ಪ, ಬಾನಂಡ ಪ್ರಥ್ಯು, ಆಪಟ್ಟೀರ ವಿಠಲ ನಾಚಯ್ಯ, ಚೆಪ್ಪುಡೀರ ಪ್ರದೀಪ್ ಪೂವಯ್ಯ, ಆಪಟ್ಟೀರ ಅಯ್ಯಪ್ಪ, ಕಾಳಪಂಡ ಟಿಪ್ಪು ಬಿದ್ದಪ್ಪ, ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ. ಡಿ. ಶಾಂತಕುಮಾರ ಇದ್ದರು.
ಪಂದ್ಯಗಳಲ್ಲಿ ಹಾತೂರು ವಿರಾಟ್ ಕ್ರಿಕೆಟರ್ಸ್ ಮತ್ತು ವೀರಾಜಪೇಟೆ ಬ್ಲಾö್ಯಕ್ ಕೋಬ್ರ ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ.
ಕ್ವಾರ್ಟರ್ ಫೈನಲ್‌ನಲ್ಲಿ ಗೋಣಿಕೊಪ್ಪ ಆಲ್‌ಸ್ಟಾರ್ ತಂಡದ ಎದುರು ೬ ವಿಕೆಟ್ ಜಯ ಸಾಧಿಸಿತು. ಆಲ್‌ಸ್ಟಾರ್ ನೀಡಿದ ೩೦ ರನ್‌ಗಳ ಗುರಿಯನ್ನು ೪ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
ವೀರಾಜಪೇಟೆ ಬ್ಲಾö್ಯಕ್ ಕೋಬ್ರ ತಂಡವು ಕಾನೂರು ಫಾರೆಸ್ಟ್ ಸೈಡರ್ಸ್ ವಿರುದ್ದ ೮ ವಿಕೆಟ್ ಜಯ ಸಾಧಿಸಿತು. ಫೈನಲ್ ಹಣಾಹಣಿ ಸೋಮವಾರ ಮಧ್ಯಾಹ್ನ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು ೨೪ ತಂಡಗಳು ಭಾಗವಹಿಸಿದ್ದವು.